ಜಿಲ್ಲೆ

ವಕ್ಫ್​ ತಿದ್ದುಪಡಿ ಕಾಯ್ದೆ ಜಾರಿ ಬೇಡ

Kopala - Raveendra V K

ಕೊಪ್ಪಳ: ವಕ್ಫ್​ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ಅಖಿಲ ಭಾರತ ಮುಸ್ಲಿಮ್​ ವೈಯಕ್ತಿಕ ಕಾನೂನು ಮಂಡಳಿ ಕರೆ ಹಿನ್ನೆಲೆಯಲ್ಲಿ ನಗರದ ಮಸೀದಿಗಳಲ್ಲಿ ಶುಕ್ರವಾರ ಪ್ರಾರ್ಥನೆ ಬಳಿಕ ಮೌನ ಪ್ರತಿಭಟನೆ ನಡೆಯಿತು.

ನಗರದ ಕುಷ್ಟಗಿ ರಸ್ತೆಯ ಖೂಬಾ ಮಸೀದಿ, ದಿಡ್ಡಿಕೇರಿ ಮಸೀದಿ ಹಾಗೂ ಇತರೆಡೆ ಮಾನವ ಸರಪಳಿ ರಚಿಸಿ ಪ್ರತಿಭಟಿಸಲಾಯಿತು. ಯಾರೂ ಬೇಡಿಕೆ ಇಡದಿದ್ದರೂ ವಕ್ಫ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಇಸ್ಲಾಂ ಧರ್ಮದ ಆಶಯಗಳಿಗೆ ವಿರುದ್ಧವಾದ ಅಂಶಗಳನ್ನು ಸೇರಿಸಲಾಗಿದೆ. ಸಂವಿಧಾನ ವಿರೂಪಗೊಳಿಸುವ ಹುನ್ನಾರ ನಡೆದಿದೆ. ಮುಸ್ಲಿಮರ ಹಕ್ಕು ಕಸಿಯುವ ಕೆಲಸ ಸಹಿಸಲಾಗದು. ವಕ್ಫ ಮುಸ್ಲಿಮರ ಆಸ್ತಿ. ಅದನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲವೆಂದು ತಿಳಿಸಿದರು.

ಪೇಶ್​ ಇಮಾಮ್​ ಹಾಫಿಝ್​ ಮೊಹಮ್ಮದ್​ ಮುಜಾಹಿದ್​ ಖಾಝಿ ರಝಾ. ಮಸೀದಿ ಕಮಿಟಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸಾಬ್​, ಉಪಾಧ್ಯಕ್ಷ ಖಾಜಾವಲಿ ಬಿಸ್ತಿ, ಮಾಜಿ ಸೈನಿಕ ರಫತುಲ್ಲಾ ಚೌದ್ರಿ, ಪ್ರಮುಖರಾದ ಖಾಜಾ ಹುಸೇನ್​ ನಿಯಾಝಿ, ಸೈಯ್ಯದ್​ ಸಲಿಮುದ್ದೀನ್​ ಅಲ್ವಿ, ವಲಿ ಅಹ್ಮದ್​ ಸಿದ್ದಿಕಿ, ಖಲೀಲ್​ ಆಹ್ಮದ್​ ದಾಗದಾರ್​, ರಜಾಕ್​ ಸಾಬ್​ ಶಿಕಲಗಾರ, ಜಾಫರ್​ ಕುರಿ ಇತರರಿದ್ದರು.