ಕೊಪ್ಪಳ: ವ್ಯಸನಮುಕ್ತ ದಿನಾಚರಣೆ ದಿನದಂದೇ ಕುಕನೂರು ತಾಲೂಕಿನ ಬಿನ್ನಾಳ ಗ್ರಾಮಸ್ಥರು ತಮ್ಮೂರನ್ನು ಮದ್ಯಪಾನ ಹಾಗೂ ಜೂಜಾಟ ಮುಕ್ತ ಗ್ರಾಮವೆಂದು ಘೋಷಿಸಿಕೊಂಡಿದ್ದಾರೆ.
ಗ್ರಾಮದ ಪ್ರಮುಖರು, ಚುನಾಯಿತ ಪ್ರತಿನಿಧಿಗಳು, ಮಹಿಳಾ, ಯುವ ಸಂ ಪದಾಧಿಕಾರಿಗಳು ಸಭೆ ನಡೆಸಿ ಒಮ್ಮತದ ರ್ನಿಣಯ ಕೈಗೊಂಡಿದ್ದಾರೆ. ಪ್ರಮುಖವಾಗಿ 11 ಷರತ್ತುಗಳನ್ನು ವಿಧಿಸಿಕೊಂಡಿದ್ದು, ಎಲ್ಲರೂ ಅದನ್ನು ಪಾಲನೆ ಮಾಡುವಂತೆ ಠರಾವು ಮಾಡಿಕೊಂಡಿದ್ದಾರೆ. ಗ್ರಾಮದಲ್ಲಿ ಅಕ್ರಮ ಮದ್ಯ ಮಾರುವವರಿಗೆ 1 ಲಕ್ಷ ರೂ. ದಂಡ ಹಾಗೂ ಪ್ರಕರಣ ದಾಖಲಿಸುವುದು.
ಗ್ರಾಮಸ್ಥರು ಅವರಿಗೆ ಜಾಮೀನು ನೀಡುವಂತಿಲ್ಲ. ಬೇರೆ ಊರಿನವರು ಬಂದು ಮಾರಾಟ ಮಾಡಿದರೆ 25 ಸಾವಿರ ರೂ. ದಂಡ, ಚುನಾವಣೆ, ಶವಸಂಸ್ಕಾರ, ದೀಪಾವಳಿಯಂಥ ದೊಡ್ಡ ಹಬ್ಬಗಳು ಸೇರಿ ಇನ್ನಿತರ ಸನ್ನಿವೇಶಗಳಲ್ಲೂ ಮದ್ಯ ಮಾರಾಟ&ಸೇವನೆಗೆ ಹಾಗೂ ಜೂಜಾಟಕ್ಕೆ ಅವಕಾಶವಿಲ್ಲ. ಅಂಗಡಿಗಳಲ್ಲಿ ಇಸ್ಪೀಟ್ ಎಲೆ ಮಾರುವುದು ನಿಷಿದ್ಧ. ಜಮೀನು ಕೆಲಸಕ್ಕೆ ಬರುವ ಕೂಲಿಕಾರರೂ ಕುಡಿದು ಬರುವಂತಿಲ್ಲವೆಂದು ರ್ನಿಣಯ ಕೈಗೊಂಡಿದ್ದಾರೆ.