ಕೊಪ್ಪಳ: ಖಾಲಿ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆ ಭರ್ತಿ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ೆಡರೇಷನ್ ಜಿಲ್ಲಾ ಪದಾಧಿಕಾರಿಗಳು ನಗರದ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಕಳೆದ 3&4 ವರ್ಷದಿಂದ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆ ಭರ್ತಿ ಮಾಡಿಲ್ಲ. ಇದರಿಂದ ಕೇಂದ್ರ ನಿರ್ವಹಣೆ ಕಷ್ಟವಾಗುತ್ತಿದೆ. ಮಕ್ಕಳ ಶಾಲಾ ಪೂರ್ವ ಶಿಕ್ಷಣ, ರಜಿಸ್ಟರ್ ಬರೆಯುವಿಕೆ, ಎ್ಎಸ್ಆರ್ ಮಾಡುವುದು ತೊಂದರೆಯಾಗುತ್ತಿದೆ. ಕೆಲವೊಂದು ಕೇಂದ್ರಗಳಲ್ಲಿ ಅಂಗವಿಕಲ ಕಾರ್ಯಕರ್ತೆಯರಿದ್ದು ಸಹಾಯಕಿಯರಲ್ಲಿದೇ ಸಾಕಷ್ಟು ಕಷ್ಟ ಅನುಭವಿಸುತ್ತಿದ್ದಾರೆಂದು ಅಳಲು ತೋಡಿಕೊಂಡರು.
ಖಾಲಿ ಹುದ್ದೆಗಳನ್ನು ಶ್ರೀ ಭರ್ತಿ ಮಾಡಿ. ಎ್ಎಸ್ಆರ್ ನಿರ್ವಹಣೆ ಕಷ್ಟವಾಗುತ್ತಿದೆ. ಒಟಿಪಿ ಸರಿಯಾಗಿ ಬರುತ್ತಿಲ್ಲ. ನೆಟ್ವರ್ಕ್ ಸೇರಿ ಇತರ ಸಮಸ್ಯೆ ಇದ್ದು, ಅದನ್ನು ರದ್ದು ಮಾಡಿ. ಎನ್ಪಿಎಸ್ ಹಣ ಬಿಡುಗಡೆ ಮಾಡಿ. ಗ್ರಾಚುಟಿ ಹಣವನ್ನು ನೀಡಿ. ನಿವೇಶನ ರಹಿತ ಕಾರ್ಯಕರ್ತೆಯರು, ಸಹಾಯಕಿಯರಿಗೆ ನಿವೇಶ ನೀಡಿ ಎಂದು ಒತ್ತಾಯಿಸಿದರು.
ಕಾರ್ಮಿಕ ಮುಖಂಡರಾದ ಡಾ.ಕೆ.ಎಸ್.ಜನಾರ್ದನ, ಎ.ಹುಲುಗಪ್ಪ, ಎ.ಎಲ್.ತಿಮ್ಮಣ್ಣ, ತುಕರಾಮ್ ಪಾತ್ರೋಟಿ, ಮುಮತಾಜ್ಬೇಗಂ, ಚನ್ನಮ್ಮ ನಾಗಣ್ಣವರ, ಶಿವಮ್ಮ ಹುಡೇದ್ ಇತರರಿದ್ದರು.