ಕೊಪ್ಪಳ: ಆನೆಗೊಂದಿ ಭಾಗದಲ್ಲಿ ನಡೆಯುತ್ತಿರುವ ಅಕ್ರಮ ಚುಟವಟಿಕೆಗಳನ್ನು ತಡೆಯುವಂತೆ ಒತ್ತಾಯಿಸಿ ಕರವೇ ಪ್ರವಿಣ ಶೆಟ್ಟಿ ಬಣದ ಪದಾಧಿಕಾರಿಗಳು ಎಡಿಸಿ ಸಿದ್ರಾಮೇಶ್ವರಗೆ ಮನವಿ ಸಲ್ಲಿಸಿದರು.
ಆನೆಗೊಂದಿ ಭಾಗ ಐತಿಹಾಸಿಕ ಪ್ರದೇಶ. ಇಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಗುಹಾಂತರ ಚಿತ್ರಗಳು, ಸ್ಮಾರಕಗಳಿಗೆ ಧಕ್ಕೆಯಾಗುತ್ತಿದೆ. ಗಂಡುಗಲಿ ಕುಮಾರರಾಮನ ಸ್ಮಾರಕಗಳು ನಾಶವಾಗುತ್ತಿವೆ. ಜತೆಗೆ ಅಕ್ರಮ ಚಟುವಟಿಕೆಗಳು ಹೆಚ್ಚಿದ್ದು, ಈ ಭಾಗಕ್ಕೆ ಕಳಂಕ ತರುತ್ತಿವೆ. ಹಂಪಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ, ಜಿಲ್ಲಾಡಳಿತ, ಪುರಾತತ್ವ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಆರೋಪಿಸಿದರು.
ಸ್ಮಾರಕಗಳನ್ನು ರಸಬೇಕು. ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಬೇಕು. ಆನೆಗೊಂದಿ ಭಾಗದ ರಾಂಪೂರ, ಮಲ್ಲಾಪೂರ, ಸಂಗಾಪೂರ, ಕಡ್ಡಿರಾಂಪೂರ, ಅಂಜನಾದ್ರಿ ಬೆಟ್ಟ, ಜಬ್ಬಲ ಗುಡ್ಡದ ಗಂಡುಗಲಿ ಕುಮಾರರಾಮ, ಕನಕಗಿರಿ ಭಾಗದ ಇತಿಹಾಸವುಳ್ಳ ಕೆಲವು ಭಾಗದಲ್ಲಿ ಸ್ಮಾರಕಗಳು ಇದ್ದು ಅವುಗಳನ್ನು ರಸಿ. ಕಲ್ಲು ಗಣಿಗಾರಿಕೆ ತಡೆಯಿರಿ. ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕ ಯೋಜನೆ ರೂಪಿಸಿ ಎಂದು ಒತ್ತಾಯಿಸಿದರು.
ಕರವೇ ಜಿಲ್ಲಾ ಪದಾಧಿಕಾರಿಗಳಾದ ಪಂಪಣ್ಣ ನಾಯಕ, ವೆಂಕಟೇಶ ಈಳಿಗೇರ, ಉಮೇಶ, ಭರಮಪ್ಪ, ಇಬ್ರಾಹಿಂ ಇತರರಿದ್ದರು.