ಕೊಪ್ಪಳ: ತಾಲೂಕಿನ ದದೇಗಲ್ ಅಂಬೇಡ್ಕರ್ ಬಾಲಕರ ವಸತಿ ನಿಲಯಕ್ಕೆ ಸೌಕರ್ಯ ಕಲ್ಪಿಸಲು ಒತ್ತಾಯಿಸಿ ಎಸ್ಎ್ಐ ಜಿಲ್ಲಾ ಪದಾಧಿಕಾರಿಗಳ ನೇತೃತ್ವದಲ್ಲಿ ವಿದ್ಯಾರ್ಥಿಗಳು ಗುರುವಾರ ಸಹಾಯಕ ನಿರ್ದೇಶಕ ಶರಣಪ್ಪಗೆ ಮನವಿ ಸಲ್ಲಿಸಿದರು.
ಹಾಸ್ಟೆಲ್ನಲ್ಲಿ ವಿದ್ಯಾರ್ಥಿಗಳು ಮೂಲಭೂತ ಸೌಲಭ್ಯಗಳಿಲ್ಲದೆ ನರಳಾಡುತ್ತಿದ್ದಾರೆ. ಗ್ರಂಥಾಲಯ, ಬೆಡ್ ಇಲ್ಲ. ಸೋಲಾರ್ ವ್ಯವಸ್ಥೆ ಇಲ್ಲ. ರಾತ್ರಿ ವಿದ್ಯುತ್ ಹೋದರೆ ಯುಪಿಎಸ್ ವ್ಯವಸ್ಥೆ ಇಲ್ಲ. ಕತ್ತಲಲ್ಲಿ ಹಾವು, ಚೇಳು ಬರುತ್ತಿವೆ. ಆವರಣದಲ್ಲಿ ನೀರು ನಿಲ್ಲುತ್ತಿದ್ದು, ಸೊಳ್ಳೆ ಹೆಚ್ಚಿ ರೋಗ ಭೀತಿ ಶುರುವಾಗಿದೆ. ದಿಪತ್ರಿಕೆ, ಸ್ಟಡಿ ಚೇರ್, ಚಪ್ಪಲ್ ಸ್ಟಾ$ಂಡ್ಗಳಿಲ್ಲದೆ ಸಮಸ್ಯೆಯಾಗುತ್ತಿದೆ ಎಂದು ಅವಲೊತ್ತುಕೊಂಡರು.
ಈ ಬಗ್ಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ವಾರದಲ್ಲಿ ಎಲ್ಲ ಸೌಲಭ್ಯ ಕಲ್ಪಿಸಬೇಕು. ವಿದ್ಯಾಭ್ಯಾಸಕ್ಕೆ ಅನುಕೂಲಕರ ವಾತಾವರಣ ನಿರ್ಮಿಸಿಕೊಡಿ. ಉತ್ತಮ ಪರಿಸರ ನಿರ್ಮಿಸಿ. ಇಲ್ಲದಿದ್ದರೆ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಎಸ್ಎ್ಐ ಜಿಲ್ಲಾಧ್ಯಕ್ಷ ಗ್ಯಾನೇಶ ಕಡಗದ, ವಿದ್ಯಾರ್ಥಿಗಳಾದ ಯಮನೂರ, ನಾಗರಾಜ್, ಅಮರೇಶ, ಭೀಮೇಶ, ಮೌನೇಶ, ದೇವರಾಜ, ಯಮನೂರಪ್ಪ ಇದ್ದರು.