ಜಿಲ್ಲೆ

ಅಲೆಮಾರಿಗಳಿಗೆ ಯೋಜನೆ ತಲುಪಿಸಿ, ನಿಗಮ ಅಧ್ಯೆ ಪಲ್ಲವಿ ಜಿ. ಸೂಚನೆ

Kopala - Raveendra V K

ಕೊಪ್ಪಳ: ಅಲೆಮಾರಿ ಸಮುದಾಯದ ಜನರು ಹಿಂದುಳಿದಿದ್ದು, ಅವರಿಗೆ ಸರ್ಕಾರಿ ಯೋಜನೆಗಳನ್ನು ಸರಿಯಾಗಿ ತಲುಪಿಸಿ ಎಂದು ಪಜಾ, ಪಪಂ ಅಲೆಮಾರಿ ಅಭಿವೃದ್ಧಿ ನಿಗಮ ಅಧ್ಯೆ ಪಲ್ಲವಿ ಜಿ. ಸೂಚಿಸಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಧಿಕಾರಿಗಳ ಸಭೆ ಉದ್ದೇಶಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಅಲೆಮಾರಿಗಳಿಗೆ ಮನೆ ಇಲ್ಲ. ಪಡಿತರ ಚೀಟಿ ಸೇರಿ ಸರ್ಕಾರದ ಸೌಲಭ್ಯಗಳಿಲ್ಲ. ಅವರು ನಮ್ಮಂತೆ ಮನುಷ್ಯರಲ್ಲವಾ ? ಅಧಿಕಾರಿಗಳು ಸೌಲಭ್ಯ ಯಾಕೆ ತಲುಪಿಸುತ್ತಿಲ್ಲ. ಯಾವೊಬ್ಬ ಅಧಿಕಾರಿಗಳು ಅವರನ್ನು ಸಂಪರ್ಕಿಸಿಲ್ಲ. ಸೌಲಭ್ಯಗಳ ಮಾಹಿತಿ ನೀಡಿಲ್ಲ. ಒದಗಿಸಿಕೊಡುವ ಕೆಲಸ ಮಾಡಿಲ್ಲ. ಕೊಪ್ಪಳದಲ್ಲಿ 43 ಸಾವಿರ ಅಲೆಮಾರಿ ಸಮುದಾಯದವರಿದ್ದಾರೆ. ಅವರಲ್ಲಿ ಎಷ್ಟು ಜನ ವಸತಿ, ಭೂ ರಹಿತರಿದ್ದಾರೆ. ಅವರಿಗೆ ಸೌಲಭ್ಯ ಸಿಕ್ಕಿಲ್ಲ. ವಸತಿ ನಿಲಯಗಳಲ್ಲಿ ಶೇ.10ರಷ್ಟು ಅಲೆಮಾರಿ ಸಮುದಾಯ ಮಕ್ಕಳಿಗೆ ಮೀಸಲಿದೆ. ಅದು ಸರಿಯಾಗಿ ಸಿಕ್ಕಿಲ್ಲ. ನಿಗಮದ ಯೋಜನೆಗಳು ಮುಟ್ಟುತ್ತಿಲ್ಲ. ಸ್ವಾತಂತ್ರ$್ಯ ಸಿಕ್ಕಿ 78 ವರ್ಷಗಳಾದರೂ ಅಲೆಮಾರಿ ಸಮುದಾಯಗಳು ರ್ನಿಲಕ್ಷ$್ಯಕ್ಕೆ ಒಳಗಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.

ತಕ್ಷಣ ಸಮಸ್ಯೆ ಸರಿಪಡಿಸಿ. ಅರ್ಹರಿಗೆ ಯೋಜನೆ ತಲುಪಿಸುವಂತೆ ನಿರ್ದೇಶಿಸಿದರು. ಸಭೆಗೂ ಮುನ್ನ ಕೊಪ್ಪಳದ ಅಲೆಮಾರಿ ಸಮುದಾಯಗಳ ಕಾಲನಿಗೆ ಭೇಟಿ ನೀಡಿದ ಅಧ್ಯೆ ಸಮಸ್ಯೆ ಆಲಿಸಿದರು. ಈ ವೇಳೆ ಅಧಿಕಾರಿಗಳು ಭೇಟಿ ನೀಡದ ಬಗ್ಗೆ, ಸೌಲಭ್ಯ ಮಾಹಿತಿ ಕೊಡದ ಬಗ್ಗೆ, ಅರ್ಜಿ ಸಲ್ಲಿಸಿದರೂ ಸತಾಯಿಸಿದ ಬಗ್ಗೆ ಜನರು ದೂರಿದರು. ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಅಧ್ಯೆ ಭರವಸೆ ನೀಡಿದರು.

ಡಿಸಿ ನಲಿನ್​ ಅತುಲ್​, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜ್ಜಪ್ಪ ಸೊಲಗದ, ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಡಿಯುಡಿಸಿ ಪಿಡಿ ರೇಷ್ಮಾ ಹಾನಗಲ್​, ಎಎಸ್ಪಿ ಹೇಮಂತ್​ ಕುಮಾರ್​, ನಿಗಮದ ಅನುಷ್ಠಾನ ಸಮಿತಿ ಸದಸ್ಯರಾದ ಹುಲುಗಪ್ಪ, ಪ್ರಕಾಶ, ವೆಂಕಟೇಶ, ಕೆ.ಬಾಲಪ್ಪ, ಡಿ.ವೆಂಕಟೇಶ, ಯಲ್ಲಪ್ಪ ಇತರರಿದ್ದರು.