ಜಿಲ್ಲೆ

ಅಲೆಮಾರಿಗಳಿಗೆ ಶೇ.1ರಷ್ಟು ಮೀಸಲು ನೀಡಿ

Kopala - Raveendra V K

ಕೊಪ್ಪಳ: ಅಲೆಮಾರಿ ಸಮುದಾಯಗಳಿಗೆ ಶೇ.1ರಷ್ಟು ಒಳ ಮೀಸಲು ಕಲ್ಪಿಸುವಂತೆ ಒತ್ತಾಯಿಸಿ ಅಸ್ಪ-----ೃಶ್ಯ ಅಲೆಮಾರಿ ಸಮುದಾಯಗಳ ಮಹಾಒಕ್ಕೂಟ ಸಂಚಾಲಕರು ಶುಕ್ರವಾರ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲು ಕಲ್ಪಿಸಿದ್ದು ಸ್ವಾಗತಾರ್ಹ. ಆದರೆ, 49 ಅಲೆಮಾರಿ ಸಮುದಾಯಗಳಿಗೆ ಅನ್ಯಾಯ ಮಾಡಲಾಗಿದೆ. ಬಲಾಢ್ಯರೊಂದಿಗೆ ನಮ್ಮನ್ನ ಸೇರಿಸಿದ್ದು ಮೀಸಲು ಕಲ್ಪಿಸಿದರೂ ಸಾಮಾಜಿಕ ನ್ಯಾಯದಿಂದ ವಂಚಿತರಾಗುವಂತೆ ಮಾಡಿದೆ. ಸರ್ಕಾರದ ನಿರ್ಧಾರ ಸುಪ್ರೀಂ ಕೋರ್ಟ್​ ಆದೇಶಕ್ಕೆ ವಿರುದ್ಧವಾಗಿದೆ. ಇದನ್ನು ಒಪ್ಪಲಾಗದು. ನಾವು ಮೀಸಲಾತಿ ವಿರುದ್ಧವಲ್ಲ. ನಮ್ಮ ಸಹೋದರ ಸಂಬಂಧಿ ಜಾತಿಗಳಿಗೂ ವಿರುದ್ಧವಿಲ್ಲ. ಅಲೆಮಾರಿಗಳಾದ ನಾವು ಈವರೆಗೂ ಸಮಾಜದ ಮುಖ್ಯವಾಹಿನಿಗೆ ಬಂದಿಲ್ಲ. ಸರ್ಕಾರದ ಯೋಜನೆಗಳು ಸರಿಯಾಗಿ ದೊರೆತಿಲ್ಲವೆಂದು ಅಳಲು ತೋಡಿಕೊಂಡರು.

ನಮ್ಮನ್ನು ಪ್ರತ್ಯೇಕ ಗುಂಪಾಗಿ ಪರಿಗಣಿಸಿ. ಶೇ.1ರಷ್ಟು ಮೀಸಲು ಪ್ರಮಾಣ ಕಲ್ಪಿಸಿ. ಇತರ ಜಾತಿಗಳೊಂದಿಗೆ ಸೇರಿಸಿ ಹಂಚಿಕೆ ಮಾಡಬೇಡಿ. ರಾಜಕೀಯ ಕಾರಣಗಳಿಗೆ ನಮಗೆ ಅನ್ಯಾಯ ಮಾಡಬಾರದು. ಸಾಮಾಜಿಕ ನ್ಯಾಯದಡಿ ಮೀಸಲು ವರ್ಗೀಕರಿಸಿದ್ದು, ನಮಗೆ ಅನ್ಯಾಯ ಮಾಡಬಾರದು. ಸರ್ಕಾರ ನಮ್ಮ ಮನವಿ ಪರಿಗಣಿಸಬೇಕು. ನಮ್ಮ ಪಾಲಿನ ಮೀಸಲು ನಮಗೆ ನೀಡಬೇಕೆಂದು ಒತ್ತಾಯಿಸಿದರು. ಅಲೆಮಾರಿ ಸಮುದಾಯ ಪ್ರಮುಖರಾದ ಸಂಜಯ್​ ದಾಸ್​ ಕೌಜಗೇರಿ, ಬಸವರಾಜ ವಿಭೂತಿ, ಶಿವಣ್ಣ ಒಂಟೆತ್ತಿನವರ ಇತರರಿದ್ದರು.