ಕಿನ್ನಾಳ ಬಾಲಕಿ ಹತ್ಯೆ ಖಂಡಿಸಿ ಕೊಪ್ಪಳದಲ್ಲಿ ಎಐಎಂಎಸ್​ಎಸ್​, ಎಐಡಿವೈಒ ಪದಾಧಿಕಾರಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು. ಸಂಟನೆಗಳ ಪದಾಧಿಕಾರಿಗಳಾದ ಮಂಜುಳಾ ಮಜ್ಜಿಗಿ, ಶರಣು ಪಾಟೀಲ್​, ಶಾರದಾ ಗಡ್ಡಿ, ಸರಸ್ವತಿ, ಮಹಾಲಕ್ಷಿ$್ಮ, ನಿರುಪಾದಿ, ಹುಲಗಪ್ಪ ಇದ್ದರು. 
ಜಿಲ್ಲೆ

ಕಿನ್ನಾಳ ಮಗುವಿನ ಕುಟುಂಬಕ್ಕೆ ನ್ಯಾಯ ಸಿಗಲಿ

ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದಲ್ಲಿ 7 ವರ್ಷದ ಬಾಲಕಿ ಅನುಶ್ರೀ ಹತ್ಯೆ ಖಂಡಿಸಿ ಹಾಗೂ ಬಾಲಕಿ ಕುಟುಂಬಕ್ಕೆ ನ್ಯಾಯ ಕೊಡಿಸುವಂತೆ ಆಗ್ರಹಿಸಿ ಅಖಿಲ ಭಾರತ ಮಹಿಳಾ ಸಾಂಸತಿಕ ಸಂಟನೆ ಜಿಲ್ಲಾ ಪದಾಧಿಕಾರಿಗಳು ಮಂಗಳವಾರ ನಗರದ ತಹಸೀಲ್​ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಎಐಎಂಎಸ್​ಎಸ್​ ಜಿಲ್ಲಾ ಸಂಚಾಲಕಿ ಮಂಜುಳಾ ಮಜ್ಜಿಗಿ ಮಾತನಾಡಿ, ಬಾಲಕಿಯನ್ನು ಅಪಹರಿಸಿ ಹತ್ಯೆ ಮಾಡಿರುವುದು ಅಮಾನವೀಯ ಟನೆ. ಇದು ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದೆ. ಇದೊಂದು ಅಮಾನುಷ ಕೃತ್ಯ. ಜಿಲ್ಲಾಡಳಿತ, ಪೊಲೀಸ್​ ಇಲಾಖೆ ಪ್ರಕರಣ ಗಂಭೀರವಾಗಿ ಪರಿಗಣಿಸಬೇಕು. ಆರೋಪಿಗಳನ್ನು ಪತ್ತೆ ಹಚ್ಚಿ ಬಾಲಕಿ ಕುಟುಂಬಕ್ಕೆ ನ್ಯಾಯ ಕೊಡಿಸಬೇಕೆಂದು ಒತ್ತಾಯಿಸಿದರು.

ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ಶರಣು ಪಾಟೀಲ್​ ಮಾತನಾಡಿ, ನಿಧಿ ಆಸೆಗೆ ಬಾಲಕಿ ಬಲಿ ನೀಡಿರುವ ಶಂಕೆ ಇದೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು. ವಿಚಾರಣೆ ತೀವ್ರಗೊಳಿಸಿ ಕೃತ್ಯ ಎಸಗಿದವರನ್ನು ಪತ್ತೆ ಮಾಡಬೇಕು. ಮುಂದೆ ಇಂಥ ಟನೆಗಳಾಗದಂತೆ ಎಚ್ಚರವಹಿಸಬೇಕು. ಬಾಲಕಿ ಕುಟುಂಬಕ್ಕೆ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿದರು.

ಜಿಲ್ಲಾ ಸಂಟಕರಾದ ಶಾರದಾ ಗಡ್ಡಿ, ಸರಸ್ವತಿ, ಮಹಾಲಕ್ಷಿ$್ಮ, ನಿರುಪಾದಿ, ಹುಲಗಪ್ಪ ಇತರರಿದ್ದರು.