ಕೊಪ್ಪಳದಲ್ಲಿ ಶನಿವಾರ ಎಐಡಿಎಸ್​ಒದಿಂದ ಹಮ್ಮಿಕೊಂಡಿದ್ದ ವಿದ್ಯಾರ್ಥಿ ಸಮಾವೇಶದಲ್ಲಿ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿದರು. ಪ್ರಾಧ್ಯಾಪಕಿ ಡಾ.ಗಾಯತ್ರಿ ಭಾವಿಕಟ್ಟಿ, ಎಐಡಿಎಸ್​ಒ ರಾಜ್ಯ ನಾಯಕ ತುಳಜರಾಮ್​ ಎನ್​.ಕೆ., ಜಿಲ್ಲಾ ಸಂಚಾಲಕ ಗಂಗರಾಜ ಅಳ್ಳಳ್ಳಿ ಇದ್ದರು. 
ಜಿಲ್ಲೆ

ಎನ್​ಇಪಿ ವಿರೋಧದಲ್ಲಿ ಎಐಡಿಎಸ್​ಒ ಪಾತ್ರ ಬಹಳ

Kopala - Raveendra V K

ಕೊಪ್ಪಳ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸುವಲ್ಲಿ ಎಐಡಿಎಸ್​ಒ ಪಾತ್ರ ಪ್ರಮುಖವಾಗಿದೆ ಎಂದು ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎಐಡಿಎಸ್​ಒದಿಂದ ಶನಿವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿ ಸಮಾವೇಶದಲ್ಲಿ ಮಾತನಾಡಿದರು.

ಎನ್​ಇಪಿ-2020 ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್​ ನೀಡುವುದು ಬಿಟ್ಟು ಬೇರೆ ಉದ್ದೇಶ ಹೊಂದಿಲ್ಲ. ಖಾಸಗೀಕರಣ, ಧರ್ಮ ತುಂಬುವ ಪಿತೂರಿ. ನಮ್ಮ ದೇಶ ವಿವಿಧತೆಯಿಂದ ತುಂಬಿದೆ. ಶಿಕ್ಷಣ ಕೇಂದ್ರೀಕರಣ ಆಗಬಾರದು. ಇದನ್ನು ವಿರೋಧಿಸಿ ಎಐಡಿಎಸ್​ಒ , ನಮ್ಮ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಪ್ರತಿಭಟನೆ, ಸಹಿ ಸಂಗ್ರಹ, ವಿಚಾರ ಸಂಕಿರಣ ಹಮ್ಮಿಕೊಂಡು ಹೋರಾಡಿದ್ದೇವೆ. ಹೋರಾಟದ ಜವಾಬ್ದಾರಿ ವಿದ್ಯಾರ್ಥಿ ಸಮುದಾಯ ತೆಗೆದುಕೊಂಡಿತ್ತು. ವಿದ್ಯಾರ್ಥಿ ಅಭಿಪ್ರಾಯವನ್ನು ರೂಪಿಸುವಲ್ಲಿ ಎಐಡಿಎಸ್​ ಪಾತ್ರವಿದೆ ಎಂದರು.

ಎಐಡಿಎಸ್​ಒ ರಾಜ್ಯ ನಾಯಕ ತುಳಜರಾಮ್​ ಎನ್​.ಕೆ. ಮಾತನಾಡಿ, ಕೇಂದ್ರ ಸರ್ಕಾರ ಜನರ ಹೋರಾಟಕ್ಕೆ ವಿರುದ್ಧವಾಗಿ ಎನ್​ಇಪಿ ಜಾರಿಗೊಳಿಸಿತು. ರಾಜ್ಯದಲ್ಲೂ ಅವೈಜ್ಞಾನಿಕವಾಗಿ ನೀತಿ ಜಾರಿಗೆ ತಂದರು. ವಿಲೀನ ಹೆಸರಿನಲ್ಲಿ ಸರ್ಕಾರಿ ಶಾಲೆ ಮುಚ್ಚುವ ತಂತ್ರ ನಡೆಯಿತು. ವಿದ್ಯಾರ್ಥಿಗಳಿಗೆ ಆದರ್ಶವಾಗಿರುವ ಅನೇಕರ ಪಠ್ಯ ತೆಗೆಯಲು, ತಿರುಚುವ ಯತ್ನ ನಡೆಯಿತು. ಅವೈಜ್ಞಾನಿಕ ವಿಧಾನ ಅಳವಡಿಸಿ ವಿದ್ಯಾರ್ಥಿಗಳ ಜೀವನ ಹಾಳು ಮಾಡುವ ಕೆಲಸಕ್ಕೆ ಮುಂದಾಯಿತು ಎಂದರು.

ಜಿಲ್ಲಾ ಸಂಚಾಲಕ ಗಂಗರಾಜ ಅಳ್ಳಳ್ಳಿ ಮಾತನಾಡಿ, ಎನ್​ಇಪಿ ವಿರೋಧಿಸಿ ಸಾರ್ವಜನಿಕ ಶಿಕ್ಷಣ ಉಳಿಸಿ ಘೋಷಣೆ ಅಡಿ ಕೋಟಿ ಸಹಿ ಸಂಗ್ರಹ ಅಭಿಯಾನ ಮಾಡಲಾಗಿದೆ. ಜಿಲ್ಲೆಯ ವಿದ್ಯಾರ್ಥಿಗಳು ಅದರಲ್ಲಿ ಸಕ್ರಿಯವಾಗಿ ಭಾಗಿಯಾದರು. ನಮ್ಮ ಜಿಲ್ಲೆಯಲ್ಲಿಯೇ 50 ಸಾವಿರ ಸಹಿ ಸಂಗ್ರಹಿಸಿದ್ದೇವೆ. ಒಗ್ಗಟ್ಟಿನ ಹೋರಾಟ ಮೂಲಕ ಶೈಕ್ಷಣಿಕ ಸಮಸ್ಯೆ ಪರಿಹರಿಸಲು ಸಾಧ್ಯ ಎಂದು ತಿಳಿಸಿದರು.

ಪ್ರಾಧ್ಯಾಪಕಿ ಡಾ.ಗಾಯತ್ರಿ ಭಾವಿಕಟ್ಟಿ, ಎಐಡಿಎಸ್​ಒ ಕಾರ್ಯಕರ್ತರಾದ ವೆಂಕಟೇಶ, ಕೊಟ್ರೇಶ, ಪ್ರದಿಪ, ಪ್ರಾಧ್ಯಾಪಕರಾದ ಮಹಾಂತೇಶ ನೆಲಾಗಣಿ, ಡಾ. ತುಕಾರಾಮ ನಾಯಕ್​, ಸೋಮೇಶ ಉಪ್ಪಾರ, ಡಾ.ಪ್ರಕಾಶ ಬಳ್ಳಾರಿ, ಡಾ.ನವೀನ, ಪಿ.ವಸಂತ ಕುಮಾರ್​, ಶಿವರಾಮ, ಡಾ.ನಾಗರಾಜ ಇತರರಿದ್ದರು.