ಜಿಲ್ಲೆ

ಜಾನುವಾರುಗಳು ಲಸಿಕೆಯಿಂದ ವಂಚಿತವಾಗದಿರಲಿ

Kopala - Raveendra V K

ಕೊಪ್ಪಳ: ಜಾನುವಾರುಗಳನ್ನು ಕಾಲು&ಬಾಯಿ ರೋಗದಿಂದ ಮುಕ್ತಗೊಳಿಸಬೇಕು. ಹೀಗಾಗಿ ಎಲ್ಲ ರಾಸುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿ ಎಂದು ಎಡಿಸಿ ಸಿದ್ರಾಮೇಶ್ವರ ಪಶುಪಾಲನಾ ಅಧಿಕಾರಿಗಳಿಗೆ ನಿರ್ದೇಶಿಸಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಕಾಲು&ಬಾಯಿ ಲಸಿಕಾ ಅಭಿಯಾನ ಪೋಸ್ಟರ್​ ಬಿಡುಗಡೆ ಮಾಡಿ ಮಾತನಾಡಿದರು.

ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಯೋಜನೆಯಡಿ ಜಿಲ್ಲೆ ಜಾನುವಾರುಗಳಿಗೆ ಕಾಲು&ಬಾಯಿ ರೋಗಕ್ಕೆ 7ನೇ ಸುತ್ತಿನ ಲಸಿಕೆ ಹಾಕಬೇಕಿದೆ. ಏ.21ರಿಂದ ಜೂನ್​ 4ವರೆಗೆ ಲಸಿಕಾ ಅಭಿಯಾನ ನಡೆಯಲಿದೆ. ರೈತರಿಗೆ ಆರ್ಥಿಕ ಸಂಕಷ್ಟ ಉಂಟು ಮಾಡುವ ರೋಗದಿಂದ ರಾಜ್ಯ ಮುಕ್ತ ಮಾಡಬೇಕಿದೆ. ಜಿಲ್ಲೆಯಲ್ಲಿ ಅಭಿಯಾನ ಸಮರ್ಪಕವಾಗಿ ಅನುಷ್ಠಾನ ಮಾಡಿ. ಯಾವೊಂದು ಜಾನುವಾರು ಬಿಡದಂತೆ ಲಸಿಕೆ ಹಾಕಿ. ಈ ಬಗ್ಗೆ ರೈತರು, ಸಾರ್ವಜನಿಕರಿಗೆ ಅರಿವು ಮೂಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಲಸಿಕಾ ಅಭಿಯಾನ ಪೋಸ್ಟರ್​ ಬಿಡುಗಡೆಗೊಳಿಸಿದರು. ಪಶುಪಾಲನಾ ಇಲಾಖೆ ಡಿಡಿ ಡಾ.ಪಿ.ಎಂ.ಮಲ್ಲಯ್ಯ, ಯಲಬುರ್ಗಾ ಸಹಾಯಕ ನಿರ್ದೇಶಕ ಡಾ.ಪ್ರಕಾಶ, ಕೊಪ್ಪಳ ಸಹಾಯಕ ನಿರ್ದೇಶಕ ಡಾ.ವಿನೋದ ಕುಮಾರ್​, ಕುಕನೂರ ಸಹಾಯಕ ನಿರ್ದೇಶಕ ಡಾ.ಸುರೇಶ್​ ಇತರರಿದ್ದರು.