ಜಿಲ್ಲೆ

ಐತಿಹಾಸಿಕ ತಾಣಗಳ ಅಭಿವೃದ್ಧಿಗೆ ಗಮನ ನೀಡಿ, ಎಡಿಸಿ

Kopala - Raveendra V K

ಕೊಪ್ಪಳ: ಜಿಲ್ಲೆಯಲ್ಲಿ ಹಲವು ಐತಿಹಾಸಿಕ ಪ್ರವಾಣಿ ತಾಣಗಳಿವೆ. ಅವುಗಳ ಅಭಿವೃದ್ಧಿಗೆ ಆದ್ಯತೆ ನೀಡಿ ಎಂದು ಎಡಿಸಿ ಸಿದ್ರಾಮೇಶ್ವರ್​ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಕೊಪ್ಪಳದಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ. ಅವುಗಳನ್ನು ರಾಷ್ಟ್ರಮಟ್ಟದಲ್ಲಿ ಅಭಿವೃದ್ಧಿಪಡಿಸಬೇಕು. ಹಿರೇ ಬೆಣಕಲ್​ನ ಮೊರೆರ ಬೆಟ್ಟ ವಿಶ್ವ ಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಅದರ ರಕ್ಷಣೆ, ಅಭಿವೃದ್ಧಿ ಜತೆಗೆ ಇತರ ಸ್ಮಾರಕಗಳನ್ನು ಗುರುತಿಸಬೇಕು. ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರಿಸಲು ಅಗತ್ಯ ಮಾಹಿತಯೊಂದಿಗೆ ಪ್ರಸ್ತಾವನೆ ಸಲ್ಲಿಸಿ. ಮಳೇಮಲ್ಲೇಶ್ವರ ಬಳಿ ಅಶೋಕ ಶಾಸನಕ್ಕೆ ಹೋಗಲು ಕಡಿದಾದ ದಾರಿಯಿದೆ. ಉತ್ತಮ ರಸ್ತೆ ನಿರ್ಮಿಸಿ. ಅಲ್ಲಲ್ಲಿ ಮಾಹಿತಿ ಲಕ ಅಳವಡಿಸಿ. ಮಳೆ, ಗಾಳಿಗೆ ಶಾಸನಕ್ಕೆ ಧಕ್ಕೆ ಆಗದಂತೆ ರಸಿ. ಕನಕಗಿರಿ ವೆಂಕಟಾಪತಿ ಬಾವಿ, ಪುಷ್ಕರಣಿ ಸೇರಿ ಇತರ ಐತಿಹಾಸಿಕ ಪ್ರವಾಸಿ ತಾಣಗಳ ಪಟ್ಟಿ ಮಾಡಿ. ಅವುಗಳನ್ನು ಸಂರತ ತಾಣಗಳೆಂದು ಘೋಷಿಸಲು ಕ್ರಮವಹಿಸಿ. ಕೊಪ್ಪಳ ಬ್ರಾ$್ಯಂಡ್​ ಯೋಜನೆಯಾಗಿ ರೂಪಿಸಿ. ಜರಿಗೆ ಹೆಚ್ಚು ಅರಿವು ಮೂಡಿಸಿ ಎಂದರು.

ಅಂಜನಾದ್ರಿ ಬೆಟ್ಟ, ಪಂಪಾ ಸರೋವರ ಸೇರಿ ಇತರ ಸ್ಥಳಗಳಿಗೆ ದೇಶ, ವಿದೇಶದ ಜನ ಭೇಟಿ ನೀಡುತ್ತಾರೆ. ಅಲ್ಲಿ ಬರುವ ಭಕ್ತರಿಗೆ ಮೂಲ ಸೌಕರ್ಯ ಕಲ್ಪಿಸಿ. ಪ್ರವಾಸೋದ್ಯಮ ಬೆಳೆಸಲು ಇಕೊ ಟೂರಿಸಂಗೆ ಆದ್ಯತೆ ನೀಡಿ. ಸೌಲಭ್ಯ ಹೆಚ್ಚಿದಲ್ಲಿ ಪ್ರವಾಸಿಗರ ಸಂಕ್ಯೆ ಹೆಚ್ಚಲಿದೆ. ಇದರಿಂದ ಆರ್ಥಿಕ ಚಟುವಟಿಕೆಗೆ ಅನುಕೂಲವಾಗಲಿದೆ. ಸ್ಥಳಿಯರಿಗೆ ಉದ್ಯೋಗ ದೊರೆಯಲಿದೆ. ಕೊಪ್ಪಳದ ಹುಲಿಕೆರೆ, ಗಂಗಾವತಿ ತಾಲೂಕಿನ ಸಣಾಪುರ ಪ್ರದೇಶದಲ್ಲಿ ಸುಂದರ ಬೆಟ್ಟ ಗುಡ್ಡಗಳಿವೆ. ರಾಕ್​ ಕ್ಲೆಂಬಿಂಗ್​ ಸೇರಿ ಇತರ ಪ್ರವಾಸಿ ಚಟುವಟಿಕೆ ಹಮ್ಮಿಕೊಳ್ಳಲು ಯೋಜನೆ ರೂಪಿಸುವಂತೆ ಪ್ರವಾಸೋದ್ಯಮ ಅಧಿಕಾರಿಗಳಿಗೆ ಸೂಚಿಸಿದರು.

ಸಹಾಯಕ ಆಯುಕ್ತ ಕ್ಯಾ.ಮಹೇಶ ಮಾಲಗಿತ್ತಿ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಡಿ.ಮಂಜುನಾಥ ಹಾಗೂ ಇತರರಿದ್ದರು.