ಜಿಲ್ಲೆ

ಶರಣರ ಜಯಂತಿ ಅಚ್ಚುಕಟ್ಟಾಗಿರಲಿ

ಕೊಪ್ಪಳ: ಜಿಲ್ಲಾಡಳಿತದಿಂದ ಏ.2ರಂದು ದೇವರ ದಾಸಿಮಯ್ಯ ಜಯಂತಿ ಹಾಗೂ ಏ.10 ರಂದು ಭಗವಾನ್​ ಮಹಾವೀರ ಜಯಂತಿಯನ್ನು ಅಚ್ಚುಕಟ್ಟಾಗಿ ಆಚರಿಸಲು ಕ್ರಮ ಕೈಗೊಳ್ಳಲು ಎಡಿಸಿ ಸಿದ್ರಾಮೇಶ್ವರ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಡಳಿತ ಭವನ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಏ.2ರ ಬೆಳಗ್ಗೆ 10.30ಕ್ಕೆ ಡಿಸಿ ಕಚೇರಿ ಸಭಾಂಗಣದಲ್ಲಿ ದೇವರದಾಸಿಮಯ್ಯ ಜಯಂತಿ ಆಚರಣೆ ನಡೆಯಲಿದೆ. ವಿವಿಧ ಇಲಾಖೆ ಅಧಿಕಾರಿಗಳು ಹಾಜರಿರಬೇಕು. ದಾಸಿಮಯ್ಯ ಕುರಿತು ಸಮುದಾಯ ಮುಖಂಡರು ಮಾತನಾಡಬಹುದು. ಭಗವಾನ್​ ಮಹಾವೀರ ಜಯಂತಿ ಏ.10ರಮದು ಕೊಪ್ಪಳದ ಜೈನ ಮಂದಿರದಲ್ಲಿ ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಬೆಳಗ್ಗೆ 8.30ಕ್ಕೆ ಅಶೋಕ ವೃತ್ತದಿಂದ ಜೈನ ಮಂದಿರವರೆಗೆ ಭಾವಚಿತ್ರ ಮೆರವಣಿಗೆ ಇರಲಿದೆ. ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸತಿ ಇಲಾಖೆ ಸಹಯೋಗದಲ್ಲಿ ಕಾರ್ಯಕ್ರಮ ಜರುಗಲಿದೆ. ಸಂಬಂಧಿಸಿದ ಅಧಿಕಾರಿಗಳು ನಿಮ್ಮ ಜವಾಬ್ದಾರಿ ಅಚ್ಚುಕಟ್ಟಾಗಿ ನಿಭಾಯಿಸಿ ಎಂದರು.

ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ಪ್ರವಾಸೋದ್ಯಮ ಇಲಾಖೆ ಎಡಿ ಡಿ.ನಾಗರಾಜ, ಅಂಬೇಡ್ಕರ್​ ಅಭಿವರದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಪುಷ್ಪಲತಾ, ಜಿಲ್ಲಾ ದೇವಾಂಗ ಸಮುದಾಯ ಅಧ್ಯಕ್ಷ ಶಿವಶಂಕರ್​ ಚನ್ನಿ, ಜಿಲ್ಲಾ ಉಪಾಧ್ಯಕ್ಷ ನಾರಾಯಣಪ್ಪ ಕೊಳ್ಳಿ, ಪ್ರಮುಖರಾದ ಪ್ರಹ್ಲಾದ್​ ಗೌಡ ಮೇದಿಕೇರಿ, ಚಂದ್ರಕಾಂತ್​ ಬೆಟಗೇರಿ, ಕೊಪ್ಪಳ ದಿಗಂಬರ ಜೈನ್​ ಸಮುದಾಯ ಜಿಲ್ಲಾಧ್ಯಕ್ಷ ಪದ್ಮಗೌಡ ಹೀರೆಗೌಡ, ಪ್ರಮುಖರಾದ ಭರತೇಶ ಪಾಟೀಲ್​, ಸೋಮನಾಥ ಪಾಟೀಲ್​, ಶಂಕರ್​ ಗೌಡ್​ ಪಾಟೀಲ್​, ಅಭಿನಂದನ ಜೈನ್​, ಹನುಮಾನ್​ ಜೈನ್​, ಹಿತೇಶ ಜೈನ್​ ಇತರರಿದ್ದರು.