ರಾಮಣ್ಣ ಉಪ್ಪಾರ 
ಜಿಲ್ಲೆ

ಅಪಘಾತದಲ್ಲಿ ಎಎಸ್​ಐ ಸಾವು

ಕೊಪ್ಪಳ: ತಾಲೂಕಿನ ವನಬಳ್ಳಾರಿ ಬಳಿ ಹಿಟ್​ ಆ್ಯಂಡ್​ ರನ್​ ಪ್ರಕರಣದಲ್ಲಿ ಎಎಸ್​ಐ ಮೃತಪಟ್ಟಿದ್ದು, ವಾಹನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಹೈವೆ ಪೆಟ್ರೋಲಿಂಗ್​ ವಿಭಾಗದ ಎಎಸ್​ಐ ರಾಮಣ್ಣ ಉಪ್ಪಾರ (55) ಮೃತ. ಕೊಪ್ಪಳ ತಾಲೂಕಿನ ವನಬಳ್ಳಾರಿ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಕರ್ತವ್ಯದಲ್ಲಿದ್ದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದು ಹೋಗಿದೆ. ಡಿಕ್ಕಿಯಾದ ರಭಸಕ್ಕೆ ತಲೆ ಭಾಗ ನುಜ್ಜುಗುಜ್ಜಾಗಿದೆ. ರಾಮಣ್ಣ ರಾತ್ರಿ ಪಾಳಯ ಕರ್ತವ್ಯದಲ್ಲಿದ್ದರು. ಶುಕ್ರವಾರ ಬೆಳಗ್ಗೆ 3 ಗಂಟೆಗೆ ಅಪಘಾತ ನಡೆದಿದೆ. ಗುದ್ದಿದ ವಾಹನ ಯಾವುದೆಂದು ಪತ್ತೆಯಾಗಿಲ್ಲ. ಹೆದ್ದಾರಿ ಅಕ್ಕಪಕ್ಕದಲ್ಲಿನ ಸಿಸಿಟಿವಿ ಕ್ಯಾಮೆರಾ ದೃಶ್ಯಾವಲಿ ಹಾಗೂ ಅನುಮಾನಾಸ್ಪದ ವಾಹನಗಳ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ವಿಷಯ ತಿಳಿದು ಎಸ್ಪಿ ಡಾ.ರಾಮ್​ ಎಲ್​.ಅರಸಿದ್ದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮುನಿರಾಬಾದ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.