ಜಿಲ್ಲೆ

ನಾಳೆ ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ

ಗಿರೀಶ ಸಗರ

ವಿಜಯಪುರ : ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಜು. 18 ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.

ಅಂದು ಮಧ್ಯಾಹ್ನ 12 ಗಂಟೆಗೆ ಡಿಸಿಸಿ ಬ್ಯಾಂಕ್​ ಬಳಿಯ ಆಲಕುಂಟೆ ನಗರದಲ್ಲಿ ಆಯೋಜಿಸಿದ ಉತ್ತರ ಕರ್ನಾಟಕ ಶಾಮಿಯಾನ್​ ಸಂದ 4ನೇ ಮಹಾ ಅಧಿವೇಶನ ಹಾಗೂ ಮಳಿಗೆಗಳ ಪ್ರದರ್ಶನ ಉದ್ಘಾಟನೆಯಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 1ಗಂಟೆಗೆ ಬಿಎಲ್​ಡಿಇ ಡೀಮ್ಡ್​ ವಿಶ್ವವಿದ್ಯಾಲಯದಲ್ಲಿ ಸಚಿವರು ಸುದ್ದಿಗೋಷ್ಠಿ ನಡೆಸಲಿದ್ದಾರೆ.

ಮಧ್ಯಾಹ್ನ 3 ಗಂಟೆಗೆ ತಿಕೋಟಾ ಪಟ್ಟಣದ ಕೊರಬು ಗಲ್ಲಿಯಲ್ಲಿ ಮಲಕನದೇವರಹಟ್ಟಿ ಇಟರಾಯನಗುಡಿ ಕೂಡು ರಸ್ತೆಯಿಂದ ಸಿದ್ದಾಪುರ ಕೆ.&ತಿಕೋಟಾ ಕೂಡು ರಸ್ತೆವರೆಗೆ ಅಂದಾಜು 495 ಲ ರೂ. ವೆಚ್ಚದಲ್ಲಿ 5.2ಕಿಮೀ. ವಾಯಾ ಉತ್ತರ ಕಾಲುವೆ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿಪೂಜೆ ಹಾಗೂ ತುಬಚಿ ಬಬಲೇಶ್ವರ ಏತನೀರಾವರಿ ಯೋಜನೆಯ ಡಿಸಿ&2 ರಿಂದ ಜಂನ್​ವರೆಗೆ ವಾಯಾ ತಿಕೋಟಾ ಕೆರೆ ಮತ್ತು ಕೊರಬು ಗಲ್ಲಿ ಮಸೂತಿವರೆಗೆ ಅಂದಾಜು 495 ಲ ರೂ. ವೆಚ್ಚದಲ್ಲಿ 5 ಕಿಮೀ ರಸ್ತೆ ಸುಧಾರಣೆ ಮತ್ತು ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಿದ್ದಾರೆ ಎಂದು ಸಚಿವರ ಕಚೇರಿ ಪ್ರಕಟಣೆ ತಿಳಿಸಿದೆ.

ಫೋಟೋ : ಎಂಎಂ 16&3

ಸಚಿವ ಎಂ.ಬಿ. ಪಾಟೀಲ

**