ಯಜ್ಞೇಶ್ ಆಚಾರ್ ಸುರತ್ಕಲ್ 
ಜಿಲ್ಲೆ

ಜುಲೈ 13ರಂದು ಜಿಲ್ಲಾ ಗಮಕ ಕಲಾ ಸಮ್ಮೇಳನ, ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಯಜ್ಞೇಶ್ ಆಚಾರ್ ಆಯ್ಕೆ

Mangaluru - Shravan Kumar Nala

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಒಂಭತ್ತನೆ ಗಮಕ ಕಲಾ ಸಮ್ಮೇಳನವು ಜುಲೈ 13ರಂದು ಸುರತ್ಕಲ್ ಗೋವಿಂದಾಸ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ. ಧಾರ್ಮಿಕ ಮುಂದಾಳು ಹರಿಕೃಷ್ಣ ಪುನರೂರು, ಕಲ್ಕೂರ ಪ್ರತಿಷ್ಠಾನದ ಮುಖ್ಯಸ್ಥ ಪ್ರದೀಪ ಕುಮಾರ ಕಲ್ಕೂರು, ಡಾ.ಎಂ ಬಿ ಪುರಾಣಿಕ್, ಗಮಕ ಕಲಾಪರಿಷತ್ತು ಜಿಲ್ಲಾಧ್ಯಕ್ಷ ಪ್ರೊ.ಮಧೂರು ಮೋಹನ ಕಲ್ಲೂರಾಯ, ತಾಲೂಕು ಅಧ್ಯಕ್ಷ ಗಮಕಿ ಸುರೇಶ್ ರಾವ್ ಅತ್ತೂರು ಸೇರಿದಂತೆ ಹಲವರು ಸೇರಿದ ಸಭೆಯಲ್ಲಿ ದ.ಕ.ಜಿಲ್ಲೆಯ ಖ್ಯಾತ ಗಮಕಿ ಯಜ್ಞೇಶ್ ಆಚಾರ್ ಸುರತ್ಕಲ್ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಒಂಭತ್ತನೆಯ ಗಮಕ ಕಲಾ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು ಎಂದು ದಕ್ಷಿಣ ಕನ್ನಡ ಜಿಲ್ಲಾ ಗಮಕ ಪರಿಷತ್ ಅಧ್ಯಕ್ಷ ಪ್ರೊ.ಮಧೂರು ಮೋಹನ ಕಲ್ಲೂರಾಯರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.