DISMISS ORDER 
ಜಿಲ್ಲೆ

ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಜಾ

ಕೊಪ್ಪಳ: ಅಧಿಕಾರ ದುರ್ಬಳಕೆ ಹಾಗೂ ಸರ್ಕಾರದ ಬೊಕ್ಕಸಕ್ಕೆ ನಷ್ಟು ಉಂಟು ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಕೆ.ಎಂ.ಸಿದ್ದೇಶ್ವರ

ಅವರನ್ನು ಸೇವೆಯಿಂದ ವಜಾಗೊಳಿಸಿ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಪೊಲೀಸ್ ಮಹಾನಿರ್ದೇಶಕರು ಸೆ.25ರಂದು ಆದೇಶಿಸಿದ್ದಾರೆ.

ಹಣ ಪಡೆದು ಅಗ್ನಿನಂದಕ ಪರೀಕ್ಷೆ ಒತ್ತಡ ಪ್ರಮಾಣ ಪತ್ರವನ್ನು ತಿರುಚಿ ಫೈರ್ ಸೇಫ್ಟಿ ಸರ್ಟಿಫಿಕೇಟ್ ಎಂದು ವಿತರಿಸಿದ್ದು, ಇದಕ್ಕೆ ಸಂಬಂಧಿಸಿದ ಶುಲ್ಕವನ್ನು ಸರ್ಕಾರಕ್ಕೆ ಭರಿಸಿಲ್ಲ.

ಇಲಾಖೆ ಸೇವೆ ನೀಡಲು ಹಣ ಪಡೆದು ಅಧಿಕಾರ ದುರ್ಬಳಕೆ ಮಾಡಿಕೊಂಡ ಬಗ್ಗೆ ಸಾರ್ವಜನಿಕರು ಹಾಗೂ ಸಂಸದ ಸಂಗಣ್ಣ ಕರಡಿ ದೂರು ಸಲ್ಲಿಸಿದರು.

ದೂರು ಆಧರಿಸಿ ಇಲಾಖೆ ವಿಚಾರಣೆ ನಡೆಸಿದ್ದು, ಕಾರಣ ಕೇಳಿ ನೀಡಿದ ನೋಟಿಸ್‌ಗೂ ಸರಿಯಾದ ಉತ್ತರ ನೀಡಿಲ್ಲ. ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಸೇವೆಯಿಂದ ವಜಾಗೊಳಿಸಿರುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ.