ಜಿಲ್ಲೆ

ಜಿಲ್ಲಾ ಪ್ರವೇಶ ನಿಷೇಧ ಹಿಂಪಡೆಯಲಿ

ವಿದ್ಯಾ ಶೆಟ್ಟನಗೌಡ್ರ

ರಾಯಬಾಗ: ಕೊಲ್ಲಾಪುರ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಅವರಿಗೆ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲಾ ಪ್ರವೇಶ ನಿಷೇಧ ಮಾಡಿರುವ ಆಜ್ಞೆಯನ್ನು ಹಿಂಪಡೆಯುವಂತೆ ಆಗ್ರಹಿಸಿ ಹಿಂದುಪರ ಸಂಘಟನೆಗಳ ಕಾರ್ಯಕರ್ತರು, ಸ್ವಾಮೀಜಿ ಅಭಿಮಾನಿಗಳು ಸೇರಿ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಅಭಾಜಿ ವೃತ್ತದವರೆಗೆ ಮೌನ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮಹಾದೇವ ಸನಮುರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮಂಗಳವಾರ ಮನವಿ ಸಲ್ಲಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ವಿವೇಕರಾವ ಪಾಟೀಲ ಮಾತನಾಡಿ, ಕನ್ಹೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಅವರಿಗೆ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲಾ ಪ್ರವೇಶ ನಿಷೇಧ ಮಾಡಿರುವ ಕ್ರಮ ಧರ್ಮದ ಶಕ್ತಿ ಕುಂದಿಸಲು ಯತ್ನಿಸಿದಂತಾಗಿದೆ. ಸರ್ಕಾರ ತಕ್ಷಣವೇ ಈ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಪರಮಾನಂದವಾಡಿಯ ಡಾ.ಅಭಿನವ ಬ್ರಹ್ಮಾನಂದ ಸ್ವಾಮೀಜಿ ಮಾತನಾಡಿದರು.

ಮೈಗೂರು ಆಶ್ರಮದ ಗುರುಪ್ರಸಾದ ಸ್ವಾಮೀಜಿ, ಮನ್ನಿಕೇರಿಯ ವಿಜಯಾನಂದ ಸ್ವಾಮೀಜಿ, ರಾಯಬಾಗದ ಅನಂತನಾನಂದ ಸ್ವಾಮೀಜಿ, ಕಲ್ಮೇಶ್ವರ ಸ್ವಾಮೀಜಿ, ಅಶೋಕ ಅಂಗಡಿ, ಪ್ರಕಾಶ ಹುಕ್ಕೇರಿ, ಲಕ್ಷ್ಮಿಕಾಂತ ದೇಸಾಯಿ, ಬಾಬುರಾವ ವಾಘಮೂಡೆ, ಭಗವಂತ ಬಂತಿ, ಶಿವಪುತ್ರ ಹಾಡಕಾರ, ಜೈದೀಪ ದೇಸಾಯಿ, ತಬಗೌಡ ಪಾಟೀಲ, ಭರಮಾ ಮಾಚಕನೂರ, ಗಣೇಶ ಕಾಂಬಳೆ, ತಯ್ಯಬ್ ಮುಲ್ಲಾ ಇತರರಿದ್ದರು.