ಅರವಿಂದ ಸಾಲವಾಡಗಿ 
ಜಿಲ್ಲೆ

ಜಿಲ್ಲಾ ಡಿಎಸ್​ಎಸ್​ ಪುನಶ್ಚೇತನ ಸಭೆ ಇಂದು

ಬಸವನಬಾಗೇವಾಡಿ: ಪಟ್ಟಣದ ಡಾ.ಬಿ.ಆರ್​ ಅಂಬೇಡ್ಕರ್​ ಭವನದಲ್ಲಿ ದಲಿತ ಸಂರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ) ಜಿಲ್ಲಾ ಟಕದಿಂದ ಪುನಶ್ಚೇತನ ಸಭೆ ಗುರುವಾರ ಬೆಳಗ್ಗೆ 10ಕ್ಕೆೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸಂಚಾಲಕ ಅರವಿಂದ ಸಾಲವಾಡಗಿ ತಿಳಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಬೇಡ್ಕರ್​ ಹಾಕಿ ಕೊಟ್ಟ ಮಾರ್ಗದಲ್ಲಿ ದಲಿತ ಸಂರ್ಷ ಸಮಿತಿ ಶಿಣ, ಸಂಟನೆ, ಹೋರಾಟದ ಸಿದ್ಧಾಂತ ಅಡಿಯಲ್ಲಿ ನಡೆದುಕೊಂಡು ಬರುತ್ತಿದೆ ಎಂದರು.

ಡಿಎಸ್​ಎಸ್​ ರಾಜ್ಯ ಸಂಟನಾ ಸಂಚಾಲಕ ಹಣಮಂತ ಕಾರ್ಕಗಲ್​ ಹಾಗೂ ಎಸ್​ ಕೀರಪ್ಪ ಸಭೆ ಉದ್ಘಾಟಿಸುವರು. ಜಿಲ್ಲಾ ಸಂಚಾಲಕ ಅರವಿಂದ ಸಾಲವಾಡಗಿ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಮಹಿಳಾ ಟಕ ಹಾಗೂ ಜಿಲ್ಲೆಯ ವಿವಿಧ ತಾಲೂಕು ಟಕಗಳ ಪದಾಧಿಕಾರಿಗಳ ೂಷಣೆ ಮಾಡಲಾಗುವುದು ಎಂದು ಹೇಳಿದರು.

ಮಾನೇಶ ಹೆಬ್ಬಾಳ, ಪರಸು ಬಸರಕೋಡ, ನಂದೀಶ ಕೊಲ್ಹಾರ, ಮುತ್ತಪ್ಪ ಕೋರವಾರ, ಭೀಮರಾವ ಮಾಸ್ತಿ, ಯಮನಪ್ಪ ಹೆಬ್ಬಾಳ ಸುದ್ದಿಗೋಷ್ಠಿಯಲ್ಲಿದ್ದರು.