ಜಿಲ್ಲೆ

ಪ್ರವಾಸಿ ಮಂದಿರದಲ್ಲಿ ಕುಳಿತು ಜಿಲ್ಲೆ ನಿರ್ಣಯ ಮಾಡಲಾಗಲ್ಲ

Gadag - Desk - Tippanna Avadoot

ಮುಂಡಗೋಡ: ಶಿರಸಿ ಪ್ರತ್ಯೇಕ ಜಿಲ್ಲಾ ಹೋರಾಟವನ್ನು ಪ್ರವಾಸ ಮಂದಿರದಲ್ಲಿ ಕುಳಿತುಕೊಂಡು ನಿರ್ಣಯ ಮಾಡುವುದಲ್ಲ ಎಂದು ಶಾಸಕ ಶಿವರಾಮ ಹೆಬ್ಬಾರ ಶುಕ್ರವಾರ ಹೇಳಿದರು.

ಪಟ್ಟಣದ ಪ್ರವಾಸ ಮಂದಿರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಈ ಜಿಲ್ಲೆಯ ಬುದ್ದಿ ಜೀವಿಗಳು, ಜಿಲ್ಲೆಯ ಎಲ್ಲ ಪಕ್ಷದ ರಾಜಕಾರಣಿಗಳು, ಸಾಹಿತಿಗಳು, ಮಾಧ್ಯಮದವರ ಜತೆ ಚರ್ಚೆ ಮಾಡಿ ಎಲ್ಲ ಸಾಧಕ- ಬಾಧಕಗಳ ಬಗ್ಗೆ ರ್ಚಚಿಸಿ ನಿರ್ಣಯಕ್ಕೆ ಬಂದ ಮೇಲೆ ಜಿಲ್ಲೆ ಆಗಬೇಕೆಂಬ ಒತ್ತಡ ತರಲು ಸಾಧ್ಯವಾಗುತ್ತದೆ ಎಂದರು.

ಕೆಲವರು ಶಿರಸಿ ಜಿಲ್ಲೆ ಎನ್ನುತ್ತಾರೆ ಮತ್ತೊಂದು ಕಡೆ ಯಲ್ಲಾಪುರ ಜಿಲ್ಲೆ ಆಗಬೇಕೆಂದು ಹೋರಾಟ ಮಾಡುತ್ತಾರೆ ಹಾಗಾಗಿ ಒಂದು ಜಿಲ್ಲೆಯ ನಿರ್ಣಯ ತೆಗೆದುಕೊಳ್ಳುವಾಗ ಐವತ್ತು, ನೂರು ಜನ ಹೋರಾಟ ಮಾಡಿ ನಿರ್ಣಯ ತೆಗೆದುಕೊಳ್ಳುವುದಲ್ಲ. ಮೊನ್ನೆ ಬೆಳಗಾವಿಯಲ್ಲಿ ಪ್ರತಿಭಟನಾ ಸ್ಥಳಕ್ಕೆ ನಾನೇ ಹೋಗಿ ಮನವಿ ಸ್ವೀಕಾರ ಮಾಡಿದ್ದೇನೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಹಾಗೂ ಕಂದಾಯ ಸಚಿವರಿಗೆ ಪತ್ರ ಬರೆದಿದ್ದೇನೆ. ಸಕಾರಾತ್ಮವಾಗಿ ಜಿಲ್ಲೆಯ ಜನರೊಂದಿಗೆ ಚರ್ಚೆ ಮಾಡಿ ಅಂತಿಮ ನಿರ್ಣಯ ತೆಗೆದುಕೊಳ್ಳಬೇಕು ಎಂದರು.

ಮಾಜಿ ಶಾಸಕ ವಿ.ಎಸ್. ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ ಇತರರಿದ್ದರು.