ವಿಜಯಪುರ : ನಗರದ ರಾಜ್ಯ ಸರ್ಕಾರಿ ನೌಕರರ ಸರ್ಕಾರಿ ಭವನದಲ್ಲಿ ಅ. 20 ರಂದು ಬೆಳಗ್ಗೆ 10.30 ಕ್ಕೆ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂದ ಜಿಲ್ಲಾ ಸಮಾವೇಶ ನಡೆಯಲಿದೆ.
ಬುರಣಾಪೂರ ಸಿದ್ಧಾರೂಢದ ಮಠದ ಯೋಗೇಶ್ವರಿ ಮಾತಾಜಿ ಮತ್ತು ಗೊರನಾಳ ಓಂಕಾರೇಶ್ವರ ಆಶ್ರಮದ ಹಿರೇಮಠ ಡಾ. ವಿರುಪಾಕ್ಷ ದೇವರು ಸಾನ್ನಿಧ್ಯ ವಹಿಸುವರು. ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂದ ರಾಜ್ಯಾಧ್ಯಕ್ಷ ಎಲ್. ಭೈರಪ್ಪ ಸಮಾವೇಶ ಉದ್ಘಾಟಿಸುವರು.
ನಿವೃತ್ತ ನೌಕರರ ಸಂ ರಾಜ್ಯ ಉಪಾಧ್ಯಕ್ಷ ಎಸ್.ಪಿ. ಬಿರಾದಾರ (ಕಡ್ಲೇವಾಡ) ಅಧ್ಯಕ್ಷತೆ ವಹಿಸುವರು. ಸಂದ ಉಪಾಧ್ಯಕ್ಷ ಜಿ.ಸಿ. ಮಂಜುನಾಥ, ಪ್ರಧಾನ ಕಾರ್ಯದರ್ಶಿ ರಂಗೇಗೌಡ, ಖಜಾಂಚಿ ಎಸ್.ಎಂ. ಆನಂದಪ್ಪ, ಉಪಾಧ್ಯಕ್ಷೆ ಎಸ್. ಶಾರದಮ್ಮ, ರಾಜ್ಯ ಸರ್ಕಾರಿ ನೌಕರರ ಸಂದ ಜಿಲ್ಲಾಧ್ಯಕ್ಷ ಸುರೇಶ ಶೇಡಸ್ಯಾಳ, ಎ.ವೈ. ಬೆಂಡಿಗೇರಿ, ಮಲ್ಲಪ್ಪ ಮುದಕವಿ, ವಿ.ಬಿ. ಗೊವಿಂದಪ್ಪ, ಎಸ್.ಎನ್. ಬಿರಾದಾರ ಭಾಗವಹಿಸುವರು ಎಂದು ಪ್ರಧಾನ ಕಾರ್ಯದರ್ಶಿ ರೇಣುಕಾ ಹುಣಸಿಗಿಡದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.