ಜಿಲ್ಲೆ

ಅನಿಷ್ಟ ಪದ್ಧತಿಗಳಿಂದ ಹೊರಬನ್ನಿ

Davangere - Desk - Shobha Krishna Gowda

ಜಗಳೂರು: ಸಮಾಜ ಮೂಢನಂಬಿಕೆ, ಬಾಲ್ಯವಿವಾಹ, ದೇವದಾಸಿ ಪದ್ಧತಿಯಂಥ ಅನಿಷ್ಟ ಸಂಪ್ರದಾಯಗಳಿಂದ ಹೊರಬರಬೇಕಾಗಿದೆ ಎಂದು ದಾವಣಗೆರೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮುಖ್ಯಸ್ಥ ವೀರೇಶ್ ಹೇಳಿದರು.

ಪಟ್ಟಣದ ದೇವರಾಜ್ ಅರಸು ಹಿಂದುಳಿದ ವರ್ಗಗಳ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಶನಿವಾರ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಕ್ಷಣಾ ನಿರ್ದೇಶನಾಲಯದಿಂದ ಮತ್ತು ರಾಜ್ಯದಲ್ಲಿ ನಿರ್ಲಕ್ಷ್ಯ್ಕೊಳಗಾಗಿ ಕುಟುಂಬದಿಂದ ಬೇರ್ಪಟ್ಟ ಬಾಲಕಾರ್ವಿುಕ, ಬಾಲ್ಯವಿವಾಹ, ಪೋಕ್ಸೊ ಹಾಗೂ ಇನ್ನಿತರ ದೌರ್ಜನ್ಯ, ಶೋಷಣೆಗೊಳಗಾದ ಮಕ್ಕಳ ಪಾಲನೆ ಮತ್ತು ರಕ್ಷಣೆ ಪುನರ್ವಸತಿಗಾಗಿ ಸರ್ಕಾರಗಳು ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದು, ಅದನ್ನು ಸದುಪಯೋಗಪಡಿಸಬೇಕು ಎಂದು ಸಲಹೆ ನೀಡಿದರು.

ನಿಲಯ ಪಾಲಕಿ ಎಚ್.ಆರ್. ತಸ್ಲೀಮ್ ಮಾತನಾಡಿ, ಶಿಕ್ಷಣದಿಂದ ದೇಶದ ಪ್ರಗತಿ ಸಾಧ್ಯ. ಹಾಗಾಗಿ ಪ್ರತಿಯೊಬ್ಬರಿಗೂ ಶಿಕ್ಷಣದ ಅರಿವು ಮುಖ್ಯವಾಗಿದ್ದು ವಿದ್ಯಾರ್ಥಿಗಳು ಚನ್ನಾಗಿ ಓದಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದರು.

ದಸಂಸ ತಾಲೂಕು ಸಂಚಾಲಕ ಮಲೆ ಮಾಚಿಕೆರೆ ಸತೀಶ್ ಮಾತನಾಡಿ, ಸಂವಿಧಾನ ಅಡಿಯಲ್ಲಿ ಹಲವಾರು ರೀತಿಯ ಅವಕಾಶ ಮತ್ತು ಸೌಲಭ್ಯಗಳಿದ್ದು ಎಲ್ಲರೂ ಈ ಅವಕಾಶಗಳನ್ನು ಬಳಸಿಕೊಂಡು ಸಂಸ್ಕಾರಯುತವಾಗಿ ಜೀವಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಡುಗೆ ಸಹಾಯಕರಾದ ರೇಖಾ, ರಂಜಿತಾ, ಜಯಮ್ಮ ಹಾಗೂ ನಿಲಯದ ವಿದ್ಯಾರ್ಥಿಗಳು ಇದ್ದರು.