ಜಿಲ್ಲೆ

ಜಿಲ್ಲಾ ಬ್ಯಾಂಕರ್ಸ್ ಪ್ರಗತಿ ಪರಿಶೀಲನಾ ಸಭೆ: ರಾಜ್ಯ,ಕೇಂದ್ರ ಸರ್ಕಾರ ಯೋಜನೆಗಳ ಲಾಭ ಫಲಾನುವಿಗಳಿಗೆ ಮುಟ್ಟಿಸಲು ಸೂಚನೆ

ಧಾರವಾಡ: ಧಾರವಾಡ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಮಿತಿ (ಡಿಎಲ್‍ಆರ್‍ಸಿ) ಸಭೆ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ಜಿಪಂ ಸಿಇಒ ಭುವನೇಶ ಪಾಟೀಲ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಾಯಧನ, ಸಾಲಗಳ ಶೀಘ್ರ ವಿತರಣೆ, ಸಾಮಾಜಿಕ ಭದ್ರತೆ ಅಭಿಯಾನದಡಿ ಪಿಎಂಜೆಜೆಬಿವೈ ಮತ್ತು ಪಿಎಂಎಸ್‍ಬಿವೈ ಯೋಜನೆಗಳಲ್ಲಿ ಜಿಲ್ಲೆಯ ಎಲ್ಲ ಅರ್ಹ ಫಲಾನುಭವಿಗಳು ಸಂಪೂರ್ಣ ಸೆರ್ಪಡೆಯಾಗಬೇಕು ಮತ್ತು ಕಡಿಮೆ ಸಿಡಿ ಅನುಪಾತ ಹೊಂದಿರುವ ಬ್ಯಾಂಕುಗಳಿಗೆ ಆದ್ಯತೆ ಕ್ಷೇತ್ರವಾದ ಸಾಲ ವಿತರಣೆಯಲ್ಲಿ ಒತ್ತು ನೀಡುವಂತೆ ಸೂಚಿಸಿದರು.

ಸಭೆಯಲ್ಲಿ ಲೀಡ್ ಬ್ಯಾಂಕ್ ಜಿಲ್ಲಾ ಮುಖ್ಯ ವ್ಯವಸ್ಥಾಪಕ ಬಸವರಾಜ ಗಡಾದವರ, ಬ್ಯಾಂಕ್ ಆಫ್ ಬರೋಡಾ ಉಪ-ಪ್ರಾದೇಶಿಕ ವ್ಯವಸ್ಥಾಪಕ ಎಜಿಎಂ ಅಮರೇಶ್ ಗೌಡ, ಆರ್.ಬಿ.ಐ ಎಜಿಎಂ ಬುಬುಲ್ ಬೊರ್ಲೋಯಿ, ನಾಬಾರ್ಡ್ ಎಜಿಎಂ ಮಯೂರ್ ಕಾಂಬಳೆ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಎಜಿಎಂ ಮತ್ತು ಪ್ರಾದೇಶಿಕ ವ್ಯವಸ್ಥಾಪಕ ಚಂದ್ರಶೇಖರ ಪಾಟೀಲ, ಧಾರವಾಡ ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಜಿಲ್ಲಾ ಮಟ್ಟದ ವಿವಿಧ ಬ್ಯಾಂಕುಗಳ ವ್ಯವಸ್ಥಾಪಕರು ಮತ್ತು ಸರ್ಕಾರಿ ಅಧಿಕಾರಿಗಳು ಭಾಗವಹಿಸಿದ್ದರು.