RAGHAVENDRA KUSTIGI 
ಜಿಲ್ಲೆ

ಅಕ್ರಮ ಮರಳುಗಾರಿಕೆ ತಡೆಯುವಲ್ಲಿ ಜಿಲ್ಲಾಡಳಿತ ವಿ-Àಲ *ಅಕ್ರಮವೆಸಗಿದವರ ಮೇಲೆ ಕ್ರಮವಾಗಲಿ-ರಾಘವೇಂದ್ರ ಕುಷ್ಟಗಿ

ರಾಯಚೂರು ಜಿಲ್ಲೆಯ ತುಂಗಭಧ್ರ ಹಾಗೂ ಕೃಷ್ಣ ನದಿ ಪಾತ್ರದಲ್ಲಿರುವ ೧೨ ಮರಳು ಬ್ಲಾಕ್‌ಗಳನ್ನು ನಿರ್ವಹಣೆ ಮಾಡದೇ ೬೫ ಬ್ಲಾಕ್‌ಗಳನ್ನು ಹರಾಜು ಮಾಡಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಮುಂದಾಗಿರುವುದು ಖಂಡನೀಯವಾಗಿದೆAದು ಜನಸಂಗ್ರಾಮ್ ಪರಿಷತ್ ಸಂಸ್ಥಾಪಕ ಅಧ್ಯಕ್ಷ ರಾಘವೇಂದ್ರ ಕುಷ್ಟಗಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಜನಪ್ರತಿನಿಽಗಳ ಹಿಂಬಾಲಕರಿAದ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಮರಳು ಗಣಿಗಾರಿಕೆಗೆ ಪರವಾನಿಗೆ ಪಡೆದ ಗುತ್ತಿಗೆದಾರರು ನದಿ ಪಾತ್ರದಲ್ಲಿ ೨-೩ ಅಡಿ ಮರಳನ್ನು ತೆಗೆಯಬೇಕೆಂಬ ನಿಯಮವಿದೆ. ಪ್ರತಿ ಬ್ಲಾಕ್‌ನಲ್ಲಿ ಇಂತಿಷ್ಟೆ ಮರಳನ್ನು ತೆಗೆಯಬೇಕೆಂಬ ನಿಯಮವಿದ್ದು, ಆದರೆ ಗುತ್ತಿಗೆದಾರರು ಲಕ್ಷಾಂತರ ಟನ್‌ಗಳಷ್ಟು ಮರಳನ್ನು ತೆಗೆದು ಪ್ರಕೃತಿಯ ಸಂಪನ್ಮೂಲವನ್ನು ಲೂಟಿ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

೧೫ ಟನ್ ಪರವಾನಿಗೆ ಪಡೆದು ಅಷ್ಟೆ ಪ್ರಮಾಣದ ರಾಯಲ್ಟಿ ಕಟ್ಟಿ ಭಾರಿ ವಾಹನಗಳಲ್ಲಿ ೫೦ ಮೆಟ್ರಿಕ್ ಟನ್ ಮರಳು ಸಾಗಾಣಿಕೆಯಾಗುತ್ತಿದೆ. ಮರಳು ಸಾಗಾಣಿಕೆ ವಾಹನಗಳಿಗೆ ನಂಬರ್ ಪ್ಲೇಟ್‌ಗಳೇ ಇರುವುದಿಲ್ಲ. ಈ ಬಗ್ಗೆ ಆರ್‌ಟಿಒ ಅಽಕಾರಿಗಳು ಹಾಗೂ ಪೊಲೀಸರು ಕಣ್ಣಿದ್ದು, ಜಾಣ ಕುರುಡರಂತೆ ವರ್ತಿಸುತ್ತಿದ್ದು, ಮರಳು ಸಾಗಾಣಿಕೆಗೆ ಬೆಳಿಗ್ಗೆ ೬ರಿಂದ ಸಂಜೆ ೬ ರವರೆಗೆ ಮಾತ್ರ ಅವಕಾಶವಿದ್ದು, ಆದರೆ ೨೪ ಗಂಟೆಯೂ ಕೂಡ

ಮರಳು ಸಾಗಾಣಿಕೆ ಮಾಡಲಾಗುತ್ತಿದ್ದು, ಇದು ಜಿಲ್ಲಾ ಟಾಸ್ಕ್-ÉÇÃರ್ಸ್ ವಿ-Àಲತೆಯಾಗಿದೆ.

ಮರಳು ಸಾಗಾಣಿಕೆ ಮಾಡುವ ಲಾರಿಗಳಿಗೆ ಜಿಪಿಎಸ್ ಅಳವಡಿಸಿ ಲಾರಿಗಳ ಮೇಲೆ ನಿಗಾ ಇಡಬೇಕಿತ್ತು. ಎಲ್ಲಾ ಸ್ಟಾಕ್ ಯಾರ್ಡ್ಗಳಲ್ಲಿ ಸಿಸಿ ಕ್ಯಾಮರಾ ಕೂಡ ಅಳವಡಿಸಬೇಕಿತ್ತು ಆದರೆ ಈ ನಿಯಮ ಎಲ್ಲಿಯೂ ಪಾಲನೆಯಾಗುತ್ತಿಲ್ಲ. ಅಕ್ರಮ ಮರಳು ಸಾಗಾಣಿಕೆ ತಡೆಯಲು ನಿಯೋಜನೆಯಾದ ಮತ್ತು ಕಾರ್ಯ ನಿರ್ವಹಿಸಿ ಅಽಕಾರಿಗಳ ಮೇಲೆ ಲಾರಿ ಹತ್ತಿಸುವ ಘಟನೆಗಳು, ಹೋರಾಟ ಮಾಡುವ ಸಾಮಾಜಿಕ ಕಾರ್ಯಕರ್ತರ ಮೇಲೆ ದಾಳಿಗಳು, ಬೆದರಿಕೆಗಳು ಕೇಳಿ ಬಂದಿವೆ. ಈ ಎಲ್ಲ ಘಟನೆಗಳ ಬಗ್ಗೆ ಗಮನಕ್ಕಿರುವ ಪೊಲೀಸ್ ಅಽಕಾರಿಗಳಾಗಲಿ,

ಜಿಲ್ಲಾಽಕಾರಿಗಳಾಗಲಿ ಯಾವುದೆ ಕ್ರಮಕ್ಕೆ ಮುಂದಾಗುತ್ತಿಲ್ಲ. ಇತ್ತೀಚೆಗೆ ಮಾನ್ವಿ ಠಾಣಾ ವ್ಯಾಪ್ತಿಯಲ್ಲಿ ೧೮ ಲಾರಿಗಳನ್ನು

ವಶಪಡಿಸಿಕೊಳ್ಳಲಾಗಿದ್ದು, ಅವುಗಳ ಪ್ರಕರಣಗಳನ್ನು ಮುಚ್ಚಿಹಾಕುವ ಸಾಧ್ಯತೆಗಳಿವೆ. ಇವಾಗ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಇದೀಗ ೬೫ ಬ್ಲಾಕ್‌ಗಳನ್ನು ಹರಾಜು ಮಾಡಿ, ೫ ವರ್ಷಗಳ ಅವಽಗೆ ಗುತ್ತಿಗೆ ನೀಡಲು ಮುಂದಾಗಿರುವುದು ಖಂಡನೀಯ ಕೂಡಲೇ ಗುತ್ತಿಗೆ ನೀಡುವನಿರ್ಣಯವನ್ನು ಮರುಪರಿಶೀಲಿಸಿ ಟೆಂಡರ್ ಪ್ರಕ್ರಿಯೆಯನ್ನು ಮುಂದೂಡಬೇಕು ಹಾಘೂ ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ

ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಪರಿಷತ್ತಿನ ವಿಭಾಗೀಯ ಕಾರ್ಯದರ್ಶಿ ಭೀಮರಾಯ ನಾಯಕ ಜೇರಬಂಡಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಖಾಜಾ ಅಸ್ಲಂ, ಜಾನ್ ವೆಸ್ಲಿ, ಪರಪ್ಪ ನಾಗೋಲಿ ಇದ್ದರು.