RAICHUR  
ಜಿಲ್ಲೆ

ಜಿಲ್ಲಾಡಳಿತದಿಂದ ಭಗವಾನ ಬುದ್ಧ ಜಯಂತಿ ಆಚರಣೆ * ಗೌತಮ್ ಬುದ್ಧರು ನಮಗೆ ಉತ್ತಮವಾದ ಜೀವನ ಮೌಲ್ಯಗಳನ್ನು ತಿಳಿಸಿದ್ದಾರೆ-ಡಾ.ಅಪ್ಪಗೆರೆ ಸೋಮಶೇಖರ್

ರಾಯಚೂರು ಪವಿತ್ರವಾದ ದೇಶದಲ್ಲಿ ಜನಿಸಲು ಪುಣ್ಯ ಮಾಡಿರಬೇಕು. ಈ ನೆಲದಲ್ಲಿ ಅನೇಕ ಸಾದು ಸಂತರು ಶರಣರು ಜನಿಸಿ ನಮಗೆ ಉತ್ತಮವಾದ ಜೀವನ ಮೌಲ್ಯಗಳನ್ನು ತಿಳಿಸಿದ್ದಾರೆ.ಅಂತಹ ಮಹನಿಯರಲ್ಲಿ ಭಗವಾನ್ ಬುದ್ಧ ಅವರು ಸಹ ಒಬ್ಬರಾಗಿದ್ದಾರೆಂದು ಖ್ಯಾತ ವಾಗ್ಮಿ ಡಾ.ಅಪ್ಪಗೆರೆ ಸೋಮಶೇಖರ್ ಹೇಳಿದರು.

ನಗರದ ಪಂ. ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಸೋಮವಾರ ಜಿಲ್ಲಾಡಳಿತ, ಜಿ.ಪಂ., ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಭಗವಾನ್ ಬುದ್ಧ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಭಗವಾನ್ ಬುದ್ಧ ಅವರು ಹೇಳಿದ ತತ್ವಗಳ ಹಾದಿಯಲ್ಲಿ ನಾವೆಲ್ಲರೂ ನಡೆಯಬೇಕು ಎಂದು ತಿಳಿಸಿದರು.

ಯಾವುದೇ ಸಮಾಜವು ಅಭಿವೃದ್ಧಿ ಹೊಂದಬೇಕಾದರೆ ಮಹನೀಯರ ಮತ್ತು ಸಂತರ ಚಿಂತನೆಗಳನ್ನು ಅಳವಡಿಸಿಕೊಳ್ಳುವುದು ಅವಶ್ಯಕತೆ ತುಂಬಾ ಇದೆ ಎಂಬುದನ್ನು ಮನಗಾಣಬೇಕು. ಮತ್ತು ಹಸಿದವರಿಗೆ ದಮ್ಮವ ಹೇಳಬೇಡಿ ಬದಲಿಗೆ ಅನ್ನವ ನೀಡಿ ಎಂದು ಮಾನವೀಯತೆಯನ್ನು ತಿಳಿಸಿದರು. ಹಾಗೆಯೇ ಪ್ರತಿಯೊಬ್ಬರೂ ಒಳ್ಳೆಯ ಮಾರ್ಗದಲ್ಲಿ ನಡೆದರೆ ನಿಮಗೇ ಸಮೃದ್ಧಿ ಆಗುವುದು ಎಂದು ಸಮುದಾಯದ ಬಂಧುಗಳಿಗೆ ಸಲಹೆ ಮಾಡಿದರು.

ಭಗವಾನ್ ಬುದ್ಧನು ದೊಡ್ಡ ನಿಸರ್ಗಾವಾದಿಯಾಗಿದ್ದರು. ಎಷ್ಟೋ ಮಹಾನರು ಬುದ್ದನ ಚಿಂತನೆಗಳನ್ನು ಅರಿತು ಅವರ ಚಿಂತನೆಯ ವಿಚಾರಗಳನ್ನ ಪ್ರಚುರಪಡಿಸಿದರು.

ತಹಸೀಲ್ದಾರ್ ಸುರೇಶ ವರ್ಮಾ ಮಾತನಾಡಿ, ಇವತ್ತು ನಾವು ನಮ್ಮ ವಿಚಾರ ಶಕ್ತಿಯಿಂದ ಬದುಕಬೇಕಾಗಿದೆ. ಒಂದಾನೊಂದು ಕಾಲದಲ್ಲಿ ರಾಯಚೂರು ನೆಲೆಯು ಬುದ್ಧ ನೆಲೆಯಾಗಿತ್ತು ಎಂದು ನೆನಪಿಸಿದರು. ಇವತ್ತು ಒಗ್ಗಟ್ಟು ಅನ್ನೋದು ತುಂಬಾ ಮಹತ್ವವಾದದ್ದು. ಯಾವುದೇ ಸಮಾಜವು ಬಲವಾಗಿ ಉಳಿಯಬೇಕಾದರೆ ಒಗ್ಗಟ್ಟು ಮುಖ್ಯವಾಗುತ್ತದೆ. ಹಾಗೆಯೇ ಬುದ್ಧನ ಹಲವಾರು ವಿಚಾರಗಳನ್ನು ಮತ್ತು ಚಿಂತನೆಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಎಚ್ಚರಿಸಿದರು.

ಮೆರವಣಿಗೆಗೆ ಚಾಲನೆ

ಬೆಳಗ್ಗೆ, ನಗರದ ಬುದ್ಧ ವಿಹಾರದಲ್ಲಿ ಆರಂಭವಾದ ಭಗವಾನ್ ಬುದ್ಧ ಅವರ ಭಾವಚಿತ್ರ ಮೆರವಣಿಗೆಗೆ ತಹಸೀಲ್ದಾರ್ ಸುರೇಶ ವರ್ಮಾ ಅವರು ಚಾಲನೆ ನೀಡಿದರು. ಮೆರವಣಿಗೆಯು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ರಂಗಮಂದಿರಕ್ಕೆ ಬಂದು ಸೇರಿತು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಅಧ್ಯಕ್ಷೆ ನರಸಮ್ಮ ನರಸಿಂಹಲು ಮಾಡಗಿರಿ, ಚಲುವಾದಿ ಸಮಾಜದ ಜಿಲ್ಲಾಧ್ಯಕ್ಷ ಭೀಮಣ್ಣ , ಬುದ್ಧ ವಿಹಾರದ ಗೌರವಾಧ್ಯಕ್ಷ ರವೀಂದ್ರನಾಥ್, ಆರ್.ರವಿಕುಮಾರ್, ಕೃವಿವಿ ಆಡಳಿತ ಮಂಡಳಿ ಸದಸ್ಯ ಮಲ್ಲೇಶ ಕೋಲಿಮಿ , ಸಮುದಾಯದ ಉಪಾಧ್ಯಕ್ಷ ಆರ.ತಿಮ್ಮಾರೆಡ್ಡಿ, ಕೆ. ಕುಮಾರ್, ಸಮಾಜದ ಸದಸ್ಯರಾದ ಆಂಜನೇಯ ಸೇರಿದಂತೆ ಅನೇಕರು ಇದ್ದರು.