JAYANTI 
ಜಿಲ್ಲೆ

ಜಿ¯್ಲÁಡಳಿತದಿಂದ ದೇವರ ದಾಸಿಮಯ್ಯ ಜಯಂತಿ ಆಚರಣೆ ವಚನಗಳ ಮೌಲ್ಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಸಲಹೆ

 ರಾಯಚೂರು ದೇವರ ದಾಸಿಮಯ್ಯನವರ ವಚನಗಳ ಮೌಲ್ಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಜೊತೆಗೆ ಮಕ್ಕಳಿಗೆ ಶಿಕ್ಷಣವನ್ನು ಒದಗಿಸುವ ಮೂಲಕ ಸಮಾಜ ಅಭಿವೃದ್ಧಿಗೆ ಕಾರಣರಾಗಬೇಕೆಂದು ಗ್ರೇಡ್-೨ ತಹಶಿಲ್ದಾರ್ ಭೀಮರಾಯ ಹೇಳಿದರು.

ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಅದಿರದಲ್ಲಿ ಬುಧವಾರ ಜಿ¯್ಲÁಡಳಿತ, ಜಿ¯್ಲÁ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಮ್ಮಿಕೊಂಡಿದ್ದ ವಚನಕಾರ ನೇಕಾರ ಸಂತ ವಿಶ್ವಮಾನ್ಯ ಶರಣ ಶ್ರೀ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ದೇವರ ದಾಸಿಮಯ್ಯ ಸೇರಿದಂತೆ ಹಲವಾರು ಮಹಾತ್ಮರ ಜಯಂತಿಗಳನ್ನು ಆಚರಣೆ ಮಾಡಲಾಗುತ್ತದೆ. ಎ¯್ಲÁ ಸಮಾಜಗಳಲ್ಲಿ ಬದಲಾವಣೆ ಜತೆಗೆ ದಾರಿ ತಪ್ಪುತಿರುವವರನ್ನು ಸರಿದಾರಿಗೆ ಕೊಂಡೋಯಲು, ತಿದ್ದುಕೊಳ್ಳುವ ಅವಕಾಶ, ಮಾನವ ಜೀವನದಲ್ಲಿ ಹೇಗೆ ಜೀವಿಸಬೇಕು ಹಾಗೂ ಬದುಕಿನ ಆಚಾರ-ವಿಚಾರಗಳ ಬಗ್ಗೆ ಅನೇಕ ಶರಣರು ತಮ್ಮ ವಚನಗಳ ಮೂಲಕ ಸಮಾಜಕ್ಕೆ ಸಂದೇಶ ನೀಡಿz್ದÁರೆ ಎಂದರು.

ಈಶ್ವರಿಯ ವಿಶ್ವವಿದ್ಯಾಲಯದ ಸಂಚಾಲಕರಾದ ಸ್ಮತಾ ಅಕ್ಕ ಮಾತನಾಡಿ, ದೇವರ ದಾಸಿಮಯ್ಯ ಕನ್ನಡದ ಆದ್ಯ ವಚನಕಾರ. ತನ್ನ ಬದುಕಿಗಾಗಿ ಮಾಡುತ್ತಿದ್ದ ನೇಯ್ಗೆವೃತ್ತಿಯ ಜೊತೆಗೆ ತನ್ನ ಕಾಯಕ ಮತ್ತು ದರ್ಶನದ ಅನುಭವಗಳ ಸಾರವನ್ನು ಬಳಸಿಕೊಂಡು ವಚನಗಳನ್ನು ರಚಿಸಿ ನಾಡನ್ನು ಬೆಳಗಿದ ಮಹಾಕಾಯಕ ಯೋಗಿ ಆಗಿz್ದÁರೆ. ಅಲ್ಲದೆ ದೇವರ ದಾಸಿಮಯ್ಯ ಅವರು ಸುಮಾರು ೧೭೬ ವಚನಗಳನ್ನು ಈ ನಾಡಿಗೆ ನೀಡಿz್ದÁರೆ ಎಂದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಅಧ್ಯಕ್ಷರಾದ ನರಸಮ್ಮ ನರಸಿಂಹಲು ಮಾಡಗಿರಿ, ನೇಕಾರ ಸಮಾಜದ ಜಿ¯್ಲÁಧ್ಯಕ್ಷರಾದ ಜಿ.ನಾಗರಾಜ, ಪ್ರದಾನ ಕಾರ್ಯದರ್ಶಿ ಹೆಚ್.ವೆಂಕಟೇಶ, ಮಹಿಳಾ ಘಟಕದ ಜಿ¯್ಲÁಧ್ಯಕ್ಷೆ ಪುಷ್ಪಾವತಿ, ತಾಲೂಕ ಗೌರವ ಅಧ್ಯಕ್ಷ ದೊಡ್ಡ ಈರಣ್ಣ ಕರ್ಲಿ, ತಾಲೂಕ ಅಧ್ಯಕ್ಷ ಉದಯಕುಮಾರ, ದತ್ತಾತ್ರೇಯ, ಪಿ.ಗೋವಿಂದ ರಾಜ, ಸುರೇಖಾ, ಶ್ರೀನಿವಾಸ ಸೇರಿದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಿಬ್ಬಂದಿಗಳು ಇದ್ದರು.