ತುಮಕೂರು: ವ್ಹೀಲ್ ಚೇರ್ನಲ್ಲಿ ಲೋಕಾಯುಕ್ತ ವಿಚಾರಣೆ ವೇಳೆ ಹಾಜರಿದ್ದ ಅಂಗವಿಕಲೆ ಪ್ರೇಮಲತಾ ದೂರಿಗೆ ಸ್ಪಂದಿಸಿದ ಉಪಲೋಕಾಯುಕ್ತ ನ್ಯಾ.ಬಿ.ವೀರಪ್ಪ ಆಕೆಯ ಹೋರಾಟಕ್ಕೆ ಕಾನೂನು ಸೇವಾ ಪ್ರಾಧಿಕಾರದ ನೆರವು ನೀಡಲು ಸಲಹೆ ಕೊಟ್ಟ ಪ್ರಸಂಗ ನಡೆಯಿತು.
ಕುಣಿಗಲ್ ತಾಲೂಕು ಕೊತ್ತಗೆರೆ ಹೋಬಳಿಯ ಚಿಕ್ಕಹೊನ್ನೇಗೌಡನಪಾಳ್ಯದ ಅಂಗವಿಕಲೆ ಪ್ರೇಮಲತಾ ತಮ್ಮ ಹೆಸರಿನ ಪಹಣಿಯನ್ನು ತಹಸೀಲ್ದಾರ್ ರದ್ದುಪಡಿಸಿರುವ ಬಗ್ಗೆ ಲೋಕಾಯುಕ್ತರಿಗೆ ನೀಡಿರುವ ದೂರಿನ ವಿಚಾರಣೆ ನಡೆಸಿದ ನ್ಯಾ.ವೀರಪ್ಪ ಅವರು ನ್ಯಾಯಾಲಯದ ಆದೇಶದಂತೆ ನಿನ್ನ ಹೆಸರಿಗೆ ಸರ್ವೇ ನಂ 52/4 ಜಮೀನನ್ನು ಮಾಡಿಕೊಟ್ಟಿದ್ದಾರೆ. ಬೇರೆ ಸರ್ವೇನಂ. ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಸಿವಿಲ್ ಕೋರ್ಟ್ನಲ್ಲಿ ದಾವೆ ಹೂಡುವಂತೆ ಸಲಹೆ ನೀಡಿದರಲ್ಲದೆ, ಅಲ್ಲೇ ಇದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾಗೆ ನ್ಯಾಯಾಲಯದಲ್ಲಿ ದಾವೆ ಹೂಡಲು ಎಲ್ಲ ರೀತಿಯ ನೆರವು ನೀಡುವಂತೆ ಸೂಚಿಸಿದರು.