ಜಿಲ್ಲೆ

ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಣೆ

ಸುಳ್ಯ: ಬ್ಯಾಂಕ್ ಆಫ್ ಬರೋಡದಿಂದ ಪ್ರವರ್ತಿಸಲ್ಪಟ್ಟ ಮಂಗಳೂರಿನ ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಸೋಣಂಗೇರಿಯ ಅಂಗನವಾಡಿ ಮಕ್ಕಳಿಗೆ ಕೊಡಲ್ಪಟ್ಟ ಸಮವಸ್ತ್ರವನ್ನು ವಿಜಯ ಗ್ರಾಮಾಭಿವೃದ್ಧಿ ಸಮಿತಿ ಜಾಲ್ಸೂರು ಆಶ್ರಯದಲ್ಲಿ ವಿತರಣೆ ಕಾರ್ಯಕ್ರಮ ಗುರುವಾರ ಸ.ಉ.ಹಿ.ಪ್ರಾ.ಶಾಲೆ ಸೋಣಂಗೇರಿಯಲ್ಲಿ ಗುರುವಾರ ನಡೆಯಿತು. ಶಿಶು ಅಭಿವೃದ್ಧಿ ಮಹಿಳಾ ಮೇಲ್ವಿಚಾರಕಿ ಉಷಾ ರೈ ಕಾರ್ಯಕ್ರಮ ಉದ್ಘಾಟಿಸಿದರು.

ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಸಿಇಒ ವಿಶ್ವನಾಥ್ ರೈ ಮಕ್ಕಳಿಗೆ ಪ್ರತಿಷ್ಠಾನದ ವತಿಯಿಂದ ಕೊಡಲ್ಪಟ್ಟ ಸಮವಸ್ತ್ರ ವಿತರಿಸಿ ಶುಭ ಹಾರೈಸಿದರು. ಜಾಲ್ಸೂರು ವಿಜಯ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಯಶ್ವಿತ್ ಕಾಳಂಮನೆ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಬ್ಯಾಂಕ್ ಆಫ್ ಬರೋಡ ಅಧಿಕಾರಿ ಸುಗುಣಾವತಿ, ಗ್ರಾಪಂ ಸದಸ್ಯ ಈಶ್ವರ್ ನಾಯ್ಕ, ಎಸ್.ಡಿ.ಎಂ.ಸಿ. ಅಧ್ಯಕ್ಷ ಚಿದಾನಂದ, ಮುಖ್ಯಶಿಕ್ಷಕಿ ಕುಸುಮಾವತಿ, ಅಂಗನವಾಡಿ ಕಾರ್ಯಕರ್ತೆ ರವಿಕಲಾ, ಕಾರ್ಯಕ್ರಮ ಸಂಯೋಜಕರಾದ ಗಣೇಶ್ ರೈ ಕುಕ್ಕಂದೂರು, ಸುಮತಿ ಹುಲಿಮನೆ ಉಪಸ್ಥಿತರಿದ್ದರು.

ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ ರೈಯವರನ್ನು ಬಾಲ ವಿಕಾಸ ಸಮಿತಿ, ಅಂಗನವಾಡಿ ವತಿಯಿಂದ ಸನ್ಮಾನಿಸಲಾಯಿತು. ಶಿಕ್ಷಕಿ ಸವಿತಾ ಕಾರ್ಯಕ್ರಮ ನಿರೂಪಿಸಿದರು.