ಜಿಲ್ಲೆ

ರೋಟರಿ ವುಡ್ಸ್‌ನಿಂದ ಸಮವಸ್ತ್ರ ವಿತರಣೆ

ಮಡಿಕೇರಿ: ಮಡಿಕೇರಿ ತಾಲೂಕಿನ ಬೊಯಿಕೇರಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ರೋಟರಿ ಮಡಿಕೇರಿ ವುಡ್ಸ್ ವತಿಯಿಂದ ಶಾಲಾ ಸಮವಸ್ತ್ರ ನೀಡಲಾಯಿತು.


ರೋಟರಿ ವುಡ್ಸ್ ಸದಸ್ಯರು ಸೇರಿದಂತೆ ದಾನಿಗಳಾದ ಹಿರಿಯ ಪತ್ರಕರ್ತ ಜಿ.ರಾಜೇಂದ್ರ ಅವರ ಸಹಯೋಗದೊಂದಿಗೆ ಶಾಲೆಯ ಒಟ್ಟು ೫೬ ವಿದ್ಯಾರ್ಥಿಗಳು, ಶಾಲೆಯಲ್ಲಿ ನಡೆದ ಕಾರ್ಯಕ್ರಮ ಸಂದರ್ಭ ಸಮವಸ್ತ್ರ ಪಡೆದುಕೊಂಡರು.


ಈ ಸಂದರ್ಭ ರೋಟರಿ ವುಡ್ಸ್ ಅಧ್ಯಕ್ಷ ಸಂಪತ್ ಕುಮಾರ್‌ರವರು ಸಂಸ್ಥೆಯು ಆರೋಗ್ಯ, ಶಿಕ್ಷಣ ಹಾಗೂ ಇತರ ಕ್ಷೇತ್ರಗಳಲ್ಲಿ ಸಾರ್ವಜನಿಕರಿಗೆ ಒದಗಿಸುತ್ತಿರುವ ಸೇವೆಗಳ ಬಗ್ಗೆ ಮಾಹಿತಿ ನೀಡಿದರು.


ಶಾಲಾ ಮುಖ್ಯೋಪಾಧ್ಯಾಯ ಎಚ್.ಎಂ.ರಾಜು ಮಾತನಾಡಿ, ವಿವಿಧ ರೋಟರಿ ಸಂಸ್ಥೆಗಳು ಶಾಲೆಗೆ ನೀಡಿರುವ ಕೊಡುಗೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.


ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ರೋಟರಿ ವುಡ್ಸ್ ಕಾರ್ಯದರ್ಶಿ ವಸಂತ್ ಕುಮಾರ್, ಸದಸ್ಯೆ ಜಿ.ಆರ್.ಪ್ರಜ್ಞಾ, ಡಾ. ಅಧಿತಿ ಪುರುಷೋತ್ತಮ್, ರವೀಂದ್ರ, ಲೀಲಾವತಿ, ಜಿ.ಆರ್.ಪ್ರಜ್ವಲ್, ವಿಕ್ರಂ ಶೆಟ್ಟಿ, ಬಾಲಸುಬ್ರಮಣ್ಯ, ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಪೂರ್ಣಯ್ಯ, ಶಿಕ್ಷಕರಾದ ಕೆ.ಸಿ.ಸುಲೋಚನ, ಪಾರ್ವತಿ ಹಾಗೂ ಗೀತಾಂಜಲಿ ಇತರರು ಹಾಜರಿದ್ದರು.