ಜಿಲ್ಲೆ

ವಿದ್ಯಾರ್ಥಿಗಳಿಗೆ ಸೂಟ್ ವಿತರಣೆ

ಜಿ.ಹೆಚ್. ಧನ್ಯಕುಮಾರ್

ಬಾಳೆಹೊನ್ನೂರು: ದೇವದಾನ ಗ್ರಾಪಂ ವ್ಯಾಪ್ತಿಯ ಹುಣಸೇಹಳ್ಳಿ ಕತಗಾರ್ ಸರ್ಕಾರಿ ಶಾಲೆ ಮಕ್ಕಳಿಗೆ ಅಮ್ಮ ೌಂಡೇಶನ್‌ನಿಂದ ಜೆಡಿಎಸ್ ಉಪಾಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ ಟ್ರಾೃಕ್‌ಸೂಟ್ ವಿತರಿಸಿದರು.
ಶಿಕ್ಷಕ ಮಹೇಶ್ ಮಾತನಾಡಿ, ಇಂದಿನ ದಿನಗಳಲ್ಲಿ ರಾಜಕೀಯ ನಾಯಕರು ಅವರುಗಳ ಪಕ್ಷದ ಕಾರ್ಯಕರ್ತರಿಗೆ ಹಲವು ಸೌಲಭ್ಯಗಳನ್ನು ಮಾಡಿಕೊಡುತ್ತಾರೆ. ಆದರೆ ಸುಧಾಕರ್ ಶೆಟ್ಟಿಯವರು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಮೇಲೆ ಕಾಳಜಿಯನ್ನು ಇಟ್ಟುಕೊಂಡು ಅವರಿಗೆ ಅಗತ್ಯವುಳ್ಳ ಸಹಕಾರ ನೀಡಿರುವುದು ಶ್ಲಾಘನೀಯವಾಗಿದೆ ಎಂದರು.
ಜೆಡಿಎಸ್ ಮುಖಂಡ ನಿರ್ಮಿತ್ ಗೌಡ ಮಾತನಾಡಿ, ಸುಧಾಕರ್ ಶೆಟ್ಟಿ ಅವರು ಕಳೆದ ಕೆಲ ವರ್ಷಗಳಿಂದ ಅಮ್ಮ ೌಂಡೇಶನ್‌ನಿಂದ ಶೃಂಗೇರಿ ಕ್ಷೇತ್ರದ ಹಲವಾರು ಶಾಲೆಗಳಿಗೆ ಹಾಗೂ ಸಮಾಜಕ್ಕೆ ವಿವಿಧ ರೀತಿಯ ಸಹಾಯ ಮಾಡುತ್ತಿದ್ದು, ಇದರು ಇತರರಿಗೆ ಮಾದರಿಯಾಗಿದೆ ಎಂದರು.
ಮುಖ್ಯಶಿಕ್ಷಕಿ ಅನುಪಮ, ಶಿಕ್ಷಕರಾದ ಸುಮತಿ, ಶೋಭಾ, ಸೋಮೇಶ್, ಜೆಡಿಎಸ್ ಮುಖಂಡರಾದ ವೆಂಕಟೇಶ್ ಭಂಡಾರಿ, ಅನಿಲ್, ಶರಣ್, ನಿಖಿಲ್, ಅಭಿಜಿತ್, ಹರ್ಷವರ್ಧನ್, ನಿತಿನ್, ದೇವಪ್ಪ, ಪ್ರತಾಪ್, ನಿವೇದಿತ್, ಕಿರಣ್, ದೇವರಾಜ್, ಸದಾನಂದ, ಸಂದೇಶ್, ಮಹೇಶ್ ಮತ್ತಿತರರು ಹಾಜರಿದ್ದರು.