ಕಲ್ಯಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೆಂಗಳೂರಿನ ನಾಗರಬಾವಿ ಸಮರ್ಪಣೆ ಟ್ರಸ್ಟ್ ವತಿಯಿಂದ ಲೇಖನ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸಲಾಯಿತು. ಅಭಿಷೇಕ್, ರೇಣುಕಾರಾಧ್ಯ ಇದ್ದರು. 
ಜಿಲ್ಲೆ

ಸರ್ಕಾರಿ ಶಾಲೆ ಮಕ್ಕಳಿಗೆ ಲೇಖನ ಸಾಮಗ್ರಿ ವಿತರಣೆ

ಅರಸೀಕೆರೆ ಗ್ರಾಮಾಂತರ: ತಾಲೂಕಿನ ಜಾವಗಲ್ ಹೋಬಳಿಯ ಉಂಡಿಗನಾಳು ಕ್ಲಸ್ಟರ್ ಕೇಂದ್ರದ 12 ಶಾಲೆಗಳಿಗೆ ಬೆಂಗಳೂರಿನ ನಾಗರಬಾವಿ ಸಮರ್ಪಣೆ ಟ್ರಸ್ಟ್ ವತಿಯಿಂದ ಶನಿವಾರ ಲೇಖನ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸಲಾಯಿತು.

ಟ್ರಸ್ಟ್ ಅಧ್ಯಕ್ಷ ಅಭಿಷೇಕ್ ಮಾತನಾಡಿ, ಬಡತನ ರೇಖೆಗಿಂತ ಕೆಳಗಿರುವ ಮಕ್ಕಳು ಹಾಗೂ ಸರ್ಕಾರಿ ಶಾಲೆ ಮಕ್ಕಳಿಗೆ ನಮ್ಮ ಟ್ರಸ್ಟ್ ನಮ್ಮ ವತಿಯಿಂದ ಲೇಖನ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕ ರೇಣುಕಾರಾದ್ಯ, ಪುಸ್ತಕಗಳನ್ನು ಮಕ್ಕಳು ಸಮರ್ಪಕವಾಗಿ ಬಳಸಿಕೊಂಡು ಶಾಲೆ ಹಾಗೂ ಟ್ರಸ್ಟ್‌ಗೆ ಹೆಸರು ತರಬೇಕು ಎಂದು ಹೇಳಿದರು.