ಮಡಿಕೇರಿ: ಪೊನ್ನಂಪೇಟೆ ತಾಲೂಕಿನ ನಾಣಚ್ಚಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕೃತಗ್ಯತಾ ಟ್ರಸ್ಟ್‌ನಿಂದ ಕ್ರೀಡಾ ಪರಿಕರಗಳನ್ನು ವಿತರಿಸಲಾಯಿತು.
ಕೃತಗ್ಯತಾ ಟ್ರಸ್ಟ್‌ನ ಪ್ರಮುಖರಾದ ಮುರುಳೀಧರ್‌ರವರು ಶಾಲೆಯ ಮಕ್ಕಳ ಕ್ರೀಡೆಯ ಉತ್ತೇಜನಕ್ಕಾಗಿ ಕೇರಂ ಬೋರ್ಡ್, ವಾಲಿಬಾಲ್, ಬ್ಯಾಡ್ಮಿಂಟನ್ ನೆಟ್ ಹಾಗೂ ಬ್ಯಾಟ್ ಸೇರಿದಂತೆ ವಿವಿಧ ಕ್ರೀಡಾ ಪರಿಕರಗಳನ್ನು ವಿತರಿಸಿದರು.
ನಾಣಚ್ಚಿ ಶಾಲೆಯನ್ನು ದತ್ತು ತೆಗೆದುಕೊಂಡಿರುವ ಮುರುಳೀಧರ್‌ರವರು ಈ ಹಿಂದೆ ಶಾಲೆಗೆ ಐದು ಕಂಪ್ಯೂಟರ್‌ಗಳನ್ನು ಕೊಡುಗೆಯಾಗಿ ನೀಡಿ ಹಾಡಿ ಮಕ್ಕಳ ವ್ಯಾಸಂಗಕ್ಕೆ ಶ್ರಮಿಸಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರು, ಉಪಾಧ್ಯಕ್ಷೆ ರೀಟಾ, ಪಿಡಿಒ ಪೂಣಚ್ಚ, ನಾಣಚ್ಚಿ ಶಾಲೆಯ ಮುಖ್ಯ ಶಿಕ್ಷಕ ಶಿವ ಕುಮಾರ್ ಮತ್ತಿತರರು ಇದ್ದರು.
ಶಾಲೆಯಲ್ಲಿ ಶಾರದಾ ಪೂಜೆಯೂ ನಡೆಯಿತು. ನಂತರ ಸ್ಥಳೀಯ ಹಾಡಿಯ ಕಲಾ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶಾಲಾ ವಿದ್ಯಾರ್ಥಿಗಳು ಹಾಡು ಹೇಳಿ ನೃತ್ಯ ಮಾಡಿ ಸಂಭ್ರಮಿಸಿದರು.