ಬನ್ನೂರಿನ ಅಂಗನವಾಡಿ ಕೇಂದ್ರಕ್ಕೆ ರೋಟರಿ ಸಂಸ್ಥೆ ವತಿಯಿಂದ ಅಗತ್ಯ ಪರಿಕರ ವಿತರಿಸಲಾಯಿತು. ಮಹೇಂದ್ರಸಿಂಗ್‌ಕಾಳಪ್ಪ, ಮಾಣಿಕ್‌ಚಂದ್‌ಚೌಧರಿ, ನಂಜುಂಡ, ಪ್ರಜ್ವಲಕೃಷ್ಣ, ಮುರುಳಿ ಇದ್ದರು. 
ಜಿಲ್ಲೆ

ಅಂಗನವಾಡಿ ಮಕ್ಕಳಿಗೆ ಕ್ರೀಡಾ ಸಾಮಗ್ರಿ ವಿತರಣೆ

ಬನ್ನೂರು: ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಆವರಣದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ರೋಟರಿ ಸಂಸ್ಥೆಯ ವತಿಯಿಂದ ಗುರುವಾರ ಕ್ರೀಡಾ ಸಾಮಗ್ರಿ ವಿತರಣೆ ಮಾಡಲಾಯಿತು.

ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ ಮಹೇಂದ್ರಸಿಂಗ್ ಕಾಳಪ್ಪ ಮಾತನಾಡಿ, ಸರ್ಕಾರ ಮಕ್ಕಳ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಅಂಗನವಾಡಿ ಕೇಂದ್ರಗಳ ಮೂಲಕ ಪೌಷ್ಟಿಕ ಆಹಾರ ನೀಡುತ್ತಿದೆ. ಇದರಿಂದ ಮಕ್ಕಳ ಆರೋಗ್ಯ ಬಹಳಷ್ಟು ಸುಧಾರಿಸುತ್ತಿದ್ದು ಎಲ್ಲರೂ ಇದರ ಉಪಯೋಗವನ್ನು ಪಡೆಯಬೇಕು ಎಂದರು.

ಮಕ್ಕಳಿಗೆ ಅನುಕೂಲವನ್ನು ಕಲ್ಪಿಸುವ ನಿಟ್ಟಿನಲ್ಲಿ ಮಾಕನಹಳ್ಳಿ, ಬಸವನಹಳ್ಳಿ, ಅತ್ತಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಅಂಗನವಾಡಿ ಕೇಂದ್ರಗಳಿಗೆ ಕ್ರೀಡಾಸಾಮಗ್ರಿ, ಲೇಖನಸಾಮಗ್ರಿ, ಕಲಿಕೋಪಕರಣವನ್ನು ನಿರಂತರವಾಗಿ ನೀಡಲಾಗುತ್ತಿದ್ದು, ಈ ವರ್ಷ ಬನ್ನೂರಿನ ಅಂಗನವಾಡಿ ಕೇಂದ್ರಕ್ಕೆ ಆಟೋಪಕರಣವನ್ನು ನೀಡಲಾಗಿದೆ ಎಂದರು.

ರೋಟರಿ ಸಂಸ್ಥೆಯ ಸದಸ್ಯರ ಜತೆಗೂಡಿ ವಿವಿಧ ಸಮುದಾಯ ಭವನ, ದೇವಾಲಯ ಆವರಣದಲ್ಲಿ ನೀರನ್ನು ಮಿತವಾಗಿ ಬಳಸಿ, ಆಹಾರವನ್ನು ವ್ಯರ್ಥಗೊಳಿಸದಿರಿ ಎನ್ನುವ ಫಲಕವನ್ನು ಅಳವಡಿಸಲಾಯಿತು.

ರೋಟರಿ ಸಂಸ್ಥೆಯ ಅಧ್ಯಕ್ಷ ವೆಂಕಟೇಶ್, ಕಾರ್ಯದರ್ಶಿ ಬಸವನಹಳ್ಳಿ ರಾಜು, ಕೃಷ್ಣೇಗೌಡ, ಮಾಣಿಕ್‌ಚಂದ್‌ಚೌಧರಿ, ನಂಜುಂಡ, ಪ್ರಜ್ವಲಕೃಷ್ಣ, ಸುಮಲತಾ, ವೆಂಕಟೇಶ್ ಪ್ರಸಾದ್, ಹನುಮಂತೇಗೌಡ, ಛಾಯಾಗ್ರಾಹಕ ಮುರಳಿ ಸೇರಿದಂತೆ ಪ್ರಮುಖರು ಇದ್ದರು.