ಹೊರನಾಡಿನ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ಅವರ ಮನೆಗೆ ಪವಿತ್ರ ಮಂತ್ರಾಕ್ಷತೆ, ಕರಪತ್ರ ಮತ್ತು ಶ್ರೀ ರಾಮನ ಭಾವಚಿತ್ರ ವಿತರಿಸಲಾಯಿತು. 
ಜಿಲ್ಲೆ

ಮಂತ್ರಾಕ್ಷತೆ, ಕರಪತ್ರ, ಶ್ರೀರಾಮನ ಭಾವಚಿತ್ರ ವಿತರಣೆ

ಕಳಸ: ಅಯೋಧ್ಯೆಯಲ್ಲಿ ನಡೆಯುವ ಶ್ರೀರಾಮಲಲ್ಲಾನ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಸೋಮವಾರ ಕಳಸದಲ್ಲಿ ಪವಿತ್ರ ಮಂತ್ರಾಕ್ಷತೆ, ಕರಪತ್ರ ಮತ್ತು ಶ್ರೀರಾಮನ ಭಾವಚಿತ್ರಗಳನ್ನು ವಿತರಿಸಲಾಯಿತು.
ಕಲಶೇಶ್ವರ ದೇವಸ್ಥಾನ, ವೆಂಕಟರಮಣ ದೇವಸ್ಥಾನ ಗಿರಿಜಾಂಬ ದೇವಸ್ಥಾನ, ಆಂಜನೇಯ ದೇವಸ್ಥಾನ, ಅಯ್ಯಪ್ಪ ಸ್ವಾಮಿ ದೇವಸ್ಥಾನ ಹಾಗೂ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀರಾಮನ ಭಾವಚಿತ್ರ ಹಾಗೂ ಮಂತ್ರಾಕ್ಷತೆ ಸಮರ್ಪಿಸಲಾಯಿತು.
ಇದೇ ಸಂದರ್ಭದಲ್ಲಿ ಹೊರನಾಡು ದೇವಸ್ಥಾನದ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ಅವರ ಮನೆಗೂ ತೆರಳಿ ಶ್ರೀರಾಮನ ಭಾವಚಿತ್ರ ಹಾಗೂ ಮಂತ್ರಾಕ್ಷತೆ ನೀಡಲಾಯಿತು. ಬಾಲಕೃಷ್ಣ ಪ್ರಭು, ಸುಜಯಸದಾನಂದ, ರಾಘವೇಂದ್ರ ಭಟ್, ಅಜಿತ್ ಕುಲಾಲ್, ಜಯಂತ್ ತೆಂಡೂಲ್ಕರ್ ಇತರರು ಇದ್ದರು.