ಲಿಂಗದಹಳ್ಳಿ ಪಶು ಆಸ್ಪತ್ರೆಯಲ್ಲಿ ರೈತರಿಗೆ ಉಚಿತ ಮೇವಿನ ಬಿತ್ತಿನೆಬೀಜದ ಕಿಟ್‌ಗಳನ್ನು ಪಶು ವೈದ್ಯಾಧಿಕಾರಿ ಡಾ. ಬಿ.ಪಿ.ಬಸವರಾಜು, ಪಶು ನಿರೀಕ್ಷಕ ಜಯಣ್ಣ ವಿತರಿಸಿದರು. 
ಜಿಲ್ಲೆ

ಬಿತ್ತನೆ ಬೀಜಗಳ ಕಿಟ್ ವಿತರಣೆ

ಎಸ್.ಎನ್.ರವೀಂದ್ರ

ಲಿಂಗದಹಳ್ಳಿ: ಪಶು ಇಲಾಖೆಯಿಂದ ರೈತರಿಗೆ 5 ಕೆ.ಜಿ. ಮೇವಿನ ಜೋಳದ ಬಿತ್ತನೆ ಬೀಜ ಕಿಟ್‌ಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ಪಶು ವೈದ್ಯಾಧಿಕಾರಿ ಡಾ. ಬಿ.ಪಿ.ಬಸವರಾಜು ತಿಳಿಸಿದರು.

ಪಶು ಆಸ್ಪತ್ರೆಯಲ್ಲಿ ಕಿಟ್‌ಗಳನ್ನು ವಿತರಿಸಿ ಮಾತನಾಡಿ, ರೈತರು ನೋಂದಣಿ ಸಂಖ್ಯೆ, ಆಧಾರ್ ಪ್ರತಿಗಳನ್ನು ಪಶು ಚಿಕಿತ್ಸಾಲಯಕ್ಕೆ ನೀಡಿ, ಉಚಿತ ಮೇವಿನ ಜೋಳದ ಕಿಟ್‌ಗಳನ್ನು ಪಡೆಯಬಹುದು ಎಂದು ಹೇಳಿದರು. ತರೀಕೆರೆ ತಾಲೂಕು ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ. ಡಿ.ದೇವೆಂದ್ರಪ್ಪ ಮಾತನಾಡಿ, ಜೋಳದ ಬಿತ್ತನೆ ಬೀಜಕ್ಕೆ ರಾಸಾಯನಿಕ ಬಳಸಿರುವುದರಿಂದ ಯಾವುದೇ ಪ್ರಾಣಿ, ಪಕ್ಷಿಗಳಿಗೆ ಹಾಕಬಾರದು. ಬಿತ್ತನೆಗಾಗಿ ಮಾತ್ರ ಉಪಯೋಗಿಸಬೇಕು ಎಂದು ತಿಳಿಸಿದರು. ಲಿಂಗದಹಳ್ಳಿ, ಹುಲಿತಿಮ್ಮಾಪುರ, ಉಡೇವಾ, ಮಲ್ಲೇನಹಳ್ಳಿ, ಯರಂದಕಲು, ಗ್ರಾಮಗಳು ಸೇರಿದಂತೆ ವಿವಿಧ ಗ್ರಾಮಗಳ ರೈತರು ಮೇವಿನ ಜೋಳದ ಕಿಟ್‌ಗಳನ್ನು ಪಡೆದುಕೊಂಡರು.