ಗಂಗಾವತಿ ತಾಲೂಕಿನ ವಡ್ಡರಹಟ್ಟಿಯಲ್ಲಿ ಮುಸ್ಲಿಂ ಸಮುದಾಯದವರು ಈದ್ ಮಿಲಾದ್ ಹಬ್ಬವನ್ನು ಮೆರಗಣಿಗೆಯೊಂದಿಗೆ ಸಂಭ್ರಮದಿಂದ ಆಚರಿಸಿದರು. ಶ್ರೀ ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು, ಪ್ರಮುಖರಾದ ಶಿವಪ್ಪ ಹತ್ತಿಮರದ, ಮೇಹರಾಜ್ ಇತರರಿದ್ದರು. 
ಜಿಲ್ಲೆ

ಅಲ್ಪೋಪಹಾರ, ಕುಡಿವ ನೀರು ವಿತರಣೆ

ಗಾಯತ್ರಿ ಮಾಲಿಪಾಟೀಲ್

ಗಂಗಾವತಿ: ನಗರ ಮತ್ತು ತಾಲೂಕಿನಾದ್ಯಂತ ಮುಸ್ಲಿಂ ಸಮುದಾಯದವರು ಶುಕ್ರವಾರ ಈದ್ ಮಿಲಾದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಮಸೀದಿ, ಮನೆಗಳಲ್ಲಿ ಪ್ರಾರ್ಥನೆ ಸಲ್ಲಿಸಿ ಪವಿತ್ರ ಮೆಕ್ಕಾ ಹಾಗೂ ಧರ್ಮ ಸಂಕೇತದ ಪ್ರತಿಕೃತಿಗಳನ್ನು ನಗರದ ಕರ್ನೂಲ್ ಬಾಬಾ ದರ್ಗಾದಿಂದ ಗಾಂಧಿ ವೃತ್ತದ ಬಳಿ ಜಾಮೀಯಾ ಮಸೀದಿವರಿಗೂ ಅದ್ದೂರಿಯಾಗಿ ಮೆರವಣಿಗೆ ಮಾಡಿದರು. ಮೆರೆವಣಿಗೆಯುದ್ದಕ್ಕೂ ಯುವ ಪಡೆಯಿಂದ ಹಾಲು, ಹಣ್ಣು, ಶರಬತ್, ಬಿಸ್ಕಿತ್, ಅಲ್ಪೋಪಹಾರ, ಕುಡಿವ ನೀರು ವಿತರಿಸಲಾಯಿತು. ನಗರ ಮತ್ತು ಗ್ರಾಮೀಣ ಭಾಗದಿಂದ ಬಂದಿದ್ದ ಧರ್ಮಗುರುಗಳನ್ನು ಶಾಸಕ ಗಾಲಿ ಜನಾರ್ದನರೆಡ್ಡಿ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಸನ್ಮಾನಿಸಿದರು.

ನಯೋಪ್ರಾ ಅಧ್ಯಕ್ಷ ಸೈಯ್ಯದ್ ಇಲಿಯಾಸ್ ಖಾದ್ರಿ, ಗ್ಯಾರಂಟಿ ಅನುಷ್ಟಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಎಸ್.ಬಿ.ಖಾದ್ರಿ, ನಗರಸಭೆ ಸದಸ್ಯ ಎಂ.ಡಿ.ಉಸ್ಮಾನ್, ಪ್ರಮುಖರಾದ ಮೌಲಸಾಬ್, ಮುಷ್ತಾಕ್ ಅಹ್ಮದ್, ಕಾಡಾ ಮಾಜಿ ಅಧ್ಯಕ್ಷ ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿ, ಪ್ರಮುಖರಾದ ಎಂ.ಅಲಿಖಾನ್, ಸೈಯ್ಯದ್‌ಅಲಿ, ದುರುಗಪ್ಪ ದಳಪತಿ, ನಾಜನೀನ್ ಇತರರಿದ್ದರು.

ಬಂದೋಬಸ್ತ್: ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ನಗರದಾದ್ಯಂತ ಸೂಕ್ತ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸ್, ಗೃಹರಕ್ಷಕದಳ ಜತೆಗೆ ರ‌್ಯಾಪಿಡ್ ಆ್ಯಕ್ಷನ್ ಪೋರ್ಸ್ ಪಡೆಯನ್ನು ನಿಯೋಜಿಸಲಾಗಿತ್ತು. ಸೂಕ್ಷ್ಮ ಪ್ರದೇಶ ಮತ್ತು ಹಿಂದು ದೇವಾಲಯಗಳ ಮುಂದೆ ರ‌್ಯಾಪಿಡ್ ಆ್ಯಕ್ಷನ್ ೆರ್ಸ್ ಮಹಿಳಾ ತುಕಡಿ ಹಾಕಿದ್ದು, ಡ್ರೋನ್ ಕಣ್ಗಾವಲಿನಲ್ಲಿ ಪೊಲೀಸ್ ಪಡೆ ನಿಗಾವಹಿಸಿತ್ತು. ಎಸ್ಪಿ ಎಲ್.ರಾಮ್ ಅರಸಿದ್ಧಿ ಮತ್ತು ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್ ನೇತೃತ್ವದಲ್ಲಿ ಮೆರವಣಿಗೆಯ ಮಾಹಿತಿ ಸಂಗ್ರಹಿಸಿದರು.

ವಡ್ಡರಹಟ್ಟಿ: ಗಂಗಾವತಿ ತಾಲೂಕಿನ ವಡ್ಡರಹಟ್ಟಿಯಲ್ಲಿ ಮುಸ್ಲಿಂ ಸಮುದಾಯದವರು ಈದ್ ಮಿಲಾದ್ ಹಬ್ಬವನ್ನು ಮೆರಗಣಿಗೆಯೊಂದಿಗೆ ಸಂಭ್ರಮದಿಂದ ಆಚರಿಸಿದರು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಶ್ರೀ ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು ಮಾತನಾಡಿ, ಸಹೋದರತ್ವ ಮತ್ತು ಸಾಮರಸ್ಯದಿಂದ ಜೀವನ ನಡೆಸೋಣ ಎಂದರು. ಪ್ರಮುಖರಾದ ಶಿವಪ್ಪ ಹತ್ತಿಮರದ, ಮೇಹರಾಜ್ ಇತರರಿದ್ದರು.