ಜಿಲ್ಲೆ

ವಿದ್ಯಾರ್ಥಿಗಳು ಸತ್ಪ್ರಜೆಯಾಗಿ ಹೊರಹೊಮ್ಮಲಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ಮಕ್ಕಳು ಹಿರಿಯರ ಮಾರ್ಗದರ್ಶನದಲ್ಲಿ ನಡೆದು ಮನೆತನಕ್ಕೂ ಹಾಗೂ ದೇಶಕ್ಕೂ ಕೀರ್ತಿ ತರಬೇಕು. ಸತ್ಪçಜೆಯÁಗಿ ಹೊರಹೊಮ್ಮಬೇಕು ಎಂದು ಮೇಯರ್ ಜ್ಯೋತಿ ಪಾಟೀಲ ಹೇಳಿದರು.

ನಗರದ ಆಲೂರ ವೆಂಕಟರಾವ್ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಶಿಷ್ಯವೇತನ ವಿತರಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಮಹಿಷಿ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಸಾವಿತ್ರಿ ಮಹಿಷಿ ಮಾತನಾಡಿ, ಮಕ್ಕಳು ಸಂಸ್ಕಾರವ0ತರಾಗಬೇಕು. ಜೀವನದಲ್ಲಿ ಶಿಸ್ತು, ಸಂಯಮ ಮತ್ತು ಸಹನೆ ಅಳವಡಿಸಿಕೊಳ್ಳಬೇಕು. ಪೋಷಿಸಿ ಬೆಳೆಸಿದ ಸಮಾಜದ ಋಣ ತೀರಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಾರ್ಯಪೃವೃತ್ತರಾಗಬೇಕು ಎಂದರು.

ನೌಕಾದಳದ ನಿವೃತ್ತ ಅಧಿಕಾರಿ ಎಂ.ಆರ್. ಕರೋಷಿ, ಸೊಲ್ಲಾಪುರದ ಎಂಐಟಿ ವಿಶ್ವ ಪ್ರಯಾಗ ವಿಶ್ವ ವಿದ್ಯಾಲಯದ ಕುಲಪತಿ ಗೋಪಾಲಕೃಷ್ಣ ಜೋಶಿ ಹಾಗೂ ಕ್ಯಾಪ್ಟನ್ ರಘುನಂದನ ಕನೇಕಲ್ ಅವರನ್ನು ಸನ್ಮಾನಿಸಲಾಯಿತು.

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ 80 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿ ಸನ್ಮಾನಿಸಲಾಯಿತು.

ವಿನಾಯಕ ಜೋಶಿ, ಗೋಪಾಲ ಕಮಲಾಪುರ, ವಸಂತ ದೇಸಾಯಿ, ಪಿ.ಜಿ. ನರಸಾಪುರ, ವೆಂಕಟೇಶ ದೇಸಾಯಿ, ಆನಂದ ಕುಲಕರ್ಣಿ, ಎಸ್.ಎಂ. ದೇಶಪಾಂಡೆ, ಜಿ.ಎಸ್. ಪಡಸಲಗಿ, ಎನ್.ಎಸ್. ಮಠ, ರಮೇಶ ಕಾಖಂಡಕಿ, ದೀಪಕ ಆಲೂರ, ಆರ್.ಡಿ. ಕುಲಕರ್ಣಿ, ಹರ್ಷ ಡಂಬಳ, ಅರವಿಂದ ಕುಲಕರ್ಣಿ, ಇತರರಿದ್ದರು.

ಎಂ.ಎನ್. ಧಾರವಾಡಕರ ವರದಿ ವಾಚಿಸಿದರು. ಅನಿಲ ಕಾಖಂಡಕಿ ನಿರೂಪಿಸಿದರು. ರಾಜೀವ ಪಾಟೀಲಕುಲಕರ್ಣಿ ವಂದಿಸಿದರು.