ಅಜ್ಜಾವರ ಸರ್ಕಾರಿ ಪ್ರೌಢಶಾಲೆಯಯಲ್ಲಿ 2024ರಲ್ಲಿ 10ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ ನೀಡಲಾಯಿತು. 
ಜಿಲ್ಲೆ

ಅಜ್ಜಾವರಶಾಲಾ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಣೆ

ಸುಳ್ಯ: ಅಜ್ಜಾವರ ಸರ್ಕಾರಿ ಪ್ರೌಢಶಾಲೆಯಯಲ್ಲಿ 2024ರಲ್ಲಿ 10ನೇ ತರಗತಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಫಾತಿಮತ್ ಜುಮೈಲಾ ಮೇನಾಲ ಮತ್ತು ವೈಷ್ಣವಿ ಮೇನಾಲ ಅವರಿಗೆ ತುಳು ಒಕ್ಕೂಟ ಕುವೈತ್ ವತಿಯಿಂದ 10 ಸಾವಿರ ರೂ.ನಂತೆ ವಿದ್ಯಾರ್ಥಿವೇತನ ವಿತರಿಸಲಾಯಿತು.

ಮುಖ್ಯಶಿಕ್ಷಕ ಗೋಪಿನಾಥ್ ಮೆತ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ಕುವೈತ್ ತುಳು ಒಕ್ಕೂಟದ ಎಕ್ಸಿಕ್ಯೂಟಿವ್ ಆಫೀಸರ್ ಮಹಮ್ಮದ್ ಐರ್ಫಾದ್ ಅಜ್ಜಾವರ ವಿದ್ಯಾರ್ಥಿವೇತನ ವಿತರಿಸಿ ಶುಭ ಹಾರೈಸಿದರು. ಅಜ್ಜಾವರ ವಿವೇಕ್ ಶಾಲಾ ಸಂಚಾಲಕ ಹಸೈನಾರ್ ಹಾಜಿ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ಮಾಸ್ತರ್, ಎಸ್‌ಡಿಎಂಸಿ ಸದಸ್ಯರಾದ ಯಾಕೂಬ್ ಅಜ್ಜಾವರ, ರೇಣುಕಾ ಮೇನಾಲ, ಲತಾ ಮಂಡೆಕೋಲು, ಗುರುರಾಜ ಅಜ್ಜಾವರ, ವಿದ್ಯಾರ್ಥಿ ನಾಯಕಿ ಭೂಮಿಕ ಜಿ.ಜೆ, ಉಪನಾಯಕ ತಶ್ವಿನ್ ಕೆ.ಆರ್., ಹಿರಿಯ ಶಿಕ್ಷಕಿ ವಿದ್ಯಾಶಂಕರಿ ಉಪಸ್ಥಿತರಿದ್ದರು.

ಶಿಕ್ಷಕ ಅಶೋಕ್ ಕೊಳಂಗಾಯ ನಿರೂಪಿಸಿದರು. ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.