ಪಡುಬಿದ್ರಿ: ಅದಮಾರು ಆದರ್ಶಸಂಘಗಳ ಒಕ್ಕೂಟದಿಂದ ವಿದ್ಯಾರ್ಥಿ ವೇತನ ಹಾಗೂ ವೈದ್ಯಕೀಯ ನೆರವು ವಿತರಣಾ ಕಾರ್ಯಕ್ರಮ ಅದಮಾರು ಸರ್ವೋದಯ ಸಮುದಾಯ ಭವನದಲ್ಲಿ ಭಾನುವಾರ ನಡೆಯಿತು. ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು, ಪದವಿ, ಪದವಿಪೂರ್ವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮತ್ತು ಇಬ್ಬರು ಅರ್ಹ ಫಲಾನುಭವಿಗೆ ವೈದ್ಯಕೀಯ ನೆರವು ವಿತರಿಸಲಾಯಿತು.
ಕಮಲಾ ಕೆ.ಶೆಟ್ಟಿ ಮತ್ತು ಸುಂದರಿ ಕಾಂತರ ಶೆಟ್ಟಿ ಸ್ಮಾರಕ ನಿಧಿಗಳಿಂದ ಹಾಗೂ ಇತರ ದಾನಿಗಳ ನೆರವಿನಿಂದ ಸಹಾಯ ಧನ ವಿತರಿಸಲಾಯಿತು. ಆದರ್ಶ ಸಂಘಗಳ ಒಕ್ಕೂಟ ಅಧ್ಯಕ್ಷ ಉದಯ ಕೆ.ಶಟ್ಟಿ ಅಧ್ಯಕ್ಷತೆ ವಹಿಸಿದ್ದರು, ದಾನಿ ನಾರಾಯಣ ಕೆ.ಶೆಟ್ಟಿ ಸಹಾಯ ಧನ ವಿತರಿಸಿದರು. ಶ್ಯಾಮಲಾ ಎನ್., ಕೆ.ಎಲ್.ಕುಂಡಂತಾಯ, ಸುದರ್ಶನ ವೈ.ಎಸ್.ಉಪಸ್ಥಿತರಿದ್ದರು. ಯುವಕ ಸಂಘ ಅಧ್ಯಕ್ಷ ಸಂತೋಷ ಜೆ.ಶೆಟ್ಟಿ ಸ್ವಾಗತಿಸಿ, ಕಾರ್ಯದರ್ಶಿ ಗಣೇಶ ಸಾಲಿಯಾನ್ ನಿರೂಪಿಸಿ, ಮಹಿಳಾ ಮಂಡಲ ಅಧ್ಯಕ್ಷೆ ಪುಷ್ಪ್ಪಾ ವಿ.ಆಚಾರ್ಯ ವಂದಿಸಿದರು.