ಜಿಲ್ಲೆ

ವಿದ್ಯಾರ್ಥಿವೇತನ ವಿತರಣೆ

ಸೌಮ್ಯ ಆರ್

ಮೂಲ್ಕಿ: ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಸಾಧಕರಾಗಿ ನಮ್ಮ ಪ್ರದೇಶ ಮತ್ತು ರಾಷ್ಟ್ರಕ್ಕೆ ಕೀರ್ತಿ ತರಬೇಕು ಎಂದು ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸತೀಶ್ ಅಂಚನ್ ಹೇಳಿದರು.

ಶೇ.7.25 ಪಂಚಾಯಿತಿ ನಿಧಿಯಿಂದ ಮೂಲ್ಕಿ ಗ್ರಾಮ ಪಂಚಾಯಿತಿಯಲ್ಲಿ ಎಸ್ಸೆಸ್ಸೆಲ್ಸಿ, ಪಿ.ಯು.ಸಿ. ಹಾಗೂ ಪದವಿ ವಿದ್ಯಾರ್ಥಿಗಳಿಗೆ 2023-24ನೇ ಸಾಲಿನ ವಿದ್ಯಾರ್ಥಿವೇತನ ಚೆಕ್ ವಿತರಿಸಿ ಮಾತನಾಡಿದರು.

ಮೂಲ್ಕಿ ನಗರ ಪಂಚಾಯಿತಿ ಉಪಾಧ್ಯಕ್ಷೆ ಲಕ್ಷ್ಮೀ, ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷರಾಜ ಶೆಟ್ಟಿ, ಮುಖ್ಯಾಧಿಕಾರಿ ಮಧುಕರ್, ಸದಸ್ಯರಾದ ಮಂಜುನಾಥ ಕಂಬಾರ, ಶೈಲೇಶ್ ಕುಮಾರ್, ವಂದನಾ ಕಾಮತ್, ಸುಭಾಷ್ ಶೆಟ್ಟಿ, ಬಾಲಚಂದ್ರ ಕಾಮತ್, ಭೀಮಾಶಂಕರ್, ರಾಧಿಕಾ ಕೋಟ್ಯಾನ್, ದಯಾವತಿ ಅಂಚನ್ ಮತ್ತಿತರರಿದ್ದರು.

ನೌಕರ ಭರತಾಂಜಲಿ ಸ್ವಾಗತಿಸಿದರು.