ಮದ್ದೂರು ತಾಲೂಕಿನ ಚಿಕ್ಕಂಕನಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ರೇಖಾಗೌಡ, ಪದ್ಮನಾಭ ದಂಪತಿ ಲೇಖನ ಸಾಮಗ್ರಿಗಳನ್ನು ನೀಡಿದರು. ಎಚ್.ಕೆ.ಆನಂದ್ ಇದ್ದರು. 
ಜಿಲ್ಲೆ

ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿ ವಿತರಣೆ

ನಾಗೇಶ ಎಸ್

ಮದ್ದೂರು: ತಾಲೂಕಿನ ಚಿಕ್ಕಂಕನಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ರೇಖಾಗೌಡ, ಪದ್ಮನಾಭ ದಂಪತಿ 30 ಸಾವಿರ ರೂ.ಮೌಲ್ಯದ ಲೇಖನ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸಿದರು.

ರೇಖಾಗೌಡ, ಪದ್ಮನಾಭ ದಂಪತಿ ಮೈಸೂರಿನಲ್ಲಿ ಬಡ ವಿದ್ಯಾರ್ಥಿಗಳಿಗಾಗಿ ಆಶ್ರಮ ನಡೆಸುತ್ತಿದ್ದು, ಅಲ್ಲಿನ ಮಕ್ಕಳು ಬಳಸಿ ಹೆಚ್ಚುವರಿಯಾಗಿ ಉಳಿದ ನೋಟ್‌ಬುಕ್ ಹಾಗೂ ಲೇಖನ ಸಾಮಗ್ರಿಗಳನ್ನು ಶಾಲೆಯ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಗಮನ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿದ್ದಾರೆ.

ಶಾಲೆಯ ಮುಖ್ಯ ಶಿಕ್ಷಕ ಎಚ್.ಕೆ.ಆನಂದ್ ಮಾತನಾಡಿ, ರೇಖಾ ಅವರು ನಮ್ಮ ಶಾಲೆಯ ವಿದ್ಯಾರ್ಥಿ ಹಾಗೂ ನನಗೆ ಶಿಷ್ಯೆಯಾಗಿದ್ದವರು. ಇವರು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಮೇಲೆ ಕಾಳಜಿಯಿಟ್ಟು ನೋಟ್‌ಬುಕ್ ಮತ್ತು ಲೇಖನಿ ಸಾಮಗ್ರಿಗಳನ್ನು ನೀಡಿರುವುದು ಮಾದರಿಯಾಗಿದೆ. ಮುಂದೆಯೂ ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಲಿ ಎಂದರು.

ರೇಖಾ ಮಾತನಾಡಿ, ಸುಮಾರು 6 ವರ್ಷಗಳಿಂದ ಮೈಸೂರಿನಲ್ಲಿ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಕರಿಸುತ್ತಾ ಊಟ, ವಸತಿ ಹಾಗೂ ಇತರ ಸೌಲಭ್ಯಗಳನ್ನು ದೊರಕಿಸಿಕೊಡಲಾಗುತ್ತಿದೆ. ಸಮೀಪದ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ದಾಖಲಿಸಿ ಅವರಿಗೆ ಊಟ, ವಸತಿ ಸೌಲಭ್ಯಗಳನ್ನು ನಡೆಸುತ್ತ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಲಾಗಿದೆ ಎಂದರು.