ಜಿಲ್ಲೆ

ವಿದ್ಯಾರ್ಥಿಗಳಿಗೆ ಪಠ್ಯ-ಪಠ್ಯೇತರ ಪರಿಕರಗಳ ವಿತರಣೆ


ಚಾಮರಾಜನಗರ: ಕೊಳ್ಳೇಗಾಲ ಪಟ್ಟಣದ ಸಿದ್ದಯ್ಯನಪುರ ಬಳಿಯಿರುವ ಸೆವೆಂತ್ ಡೇ ಅಡ್ವೆಂಟಿಸ್ಟ್ ವಾಕ್ ಮತ್ತು ಶ್ರವಣ ನ್ಯೂನತೆಯ ವಸತಿ ಶಾಲೆಯ ಮಕ್ಕಳಿಗೆ ಬೆಂಗಳೂರಿನ ಉದ್ಯಮಿ ಸುನೀತಾ ತಿಮ್ಮೇಗೌಡ ಅವರ ಪುತ್ರ ಯುವ ಉದ್ಯಮಿ ಆರ್ಯಮನ್ ಪಠ್ಯ-ಪಠ್ಯೇತರ ಸಾಮಗ್ರಿಗಳನ್ನು ಬುಧವಾರ ವಿತರಣೆ ಮಾಡಿದರು.


ಆರ್ಯಮನ್ ಮಾತನಾಡಿ, ಬಾಲ್ಯದ ಕ್ಷಣಗಳು ಪ್ರತಿಯೊಬ್ಬ ಮಕ್ಕಳಿಗೂ ಸಿಗಬೇಕು. ಈ ನಿಟ್ಟಿನಲ್ಲಿ ವಿಶೇಷಚೇತನ ಮಕ್ಕಳ ಓದಿಗೆ ಸಹಾಯವಾಗಲು ಪುಸ್ತಕ, ಪೆನ್ನು, ಬಣ್ಣದ ಪೆನ್ಸಿಲ್‌ಗಳು, ಮಾಹಿತಿ ಚಾರ್ಟ್ ಹಾಗೂ ಟೆನಿಸ್ ಬಾಲ್, ಬಾಸ್ಕೆಟ್ ಬಾಲ್, ಫುಟ್ಬಾಲ್, ಬ್ಯಾಟ್, ಶೆಟಲ್ ಬ್ಯಾಡ್ಮಿಂಟನ್ ಇನ್ನಿತರ ಸಾಮಗ್ರಿಗಳನ್ನು ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಈ ಶಾಲೆಗೆ ಇನ್ನೂ ಹೆಚ್ಚಿನ ಸಹಾಯ ಮಾಡುತ್ತೇನೆ ಎಂದರು.


ಉದ್ಯಮಿ ಸುನೀತಾ ತಿಮ್ಮೇಗೌಡ ಮಾತನಾಡಿ, ನನ್ನ ಹುಟ್ಟೂರು ಕೊಳ್ಳೇಗಾಲವಾದ ಕಾರಣ ನನ್ನ ಮಗ ಆರ್ಯಮನ್ ಇತ್ತೀಚೆಗೆ ವಿಶೇಷಚೇತನ ವಸತಿ ಶಾಲೆಯ ಮಕ್ಕಳಿಗೆ ಉಪಾಹಾರ ವ್ಯವಸ್ಥೆ ಮಾಡಿದ್ದನು. ಆಗ ಕ್ರೀಡಾ ಸಾಮಗ್ರಿಗಳ ಕೊರತೆ ಇರುವುದು ತಿಳಿದ ಕಾರಣ ಪುಸ್ತಕಗಳ ಜತೆ ಇಂದು ಆಟದ ಸಾಮಗ್ರಿಗಳನ್ನು ನೀಡಿದ್ದೇವೆ ಎಂದರು.

ಜಪಾನ್ ದೇಶದ ಉದ್ಯಮಿ ಜೆನ್ಕಿ ನಿಶಿಮುರ ಮಾತನಾಡಿದರು. ನಗರಸಭೆ ಮಾಜಿ ಉಪಾಧ್ಯಕ್ಷ ಹರ್ಷ, ವಿವೇಕಾನಂದ ಡ್ರೈವಿಂಗ್ ಸ್ಕೂಲ್ ರಾಜೇಶ್, ವಸತಿ ಶಾಲೆಯ ಸಿಬ್ಬಂದಿ ಹಾಗೂ ಮತ್ತಿತರರಿದ್ದರು.