ಜಿಲ್ಲೆ

ಶೇ. 3ರ ಬಡ್ಡಿದರದಲ್ಲಿ ರೈತರಿಗೆ 150ಕ್ಕೂ ಹೆಚ್ಚು ಟ್ರ್ಯಾಕ್ಟರ್ ವಿತರಣೆ

ರಟ್ಟಿಹಳ್ಳಿ: ಹಿರೇಕೆರೂರು ಮತ್ತು ರಟ್ಟಿಹಳ್ಳಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮೂಲಕ ರೈತರಿಗೆ ನಾಬಾರ್ಡ್ ಯೋಜನೆಯಡಿ ಶೇ. 3ರ ಬಡ್ಡಿದರದಲ್ಲಿ 150ಕ್ಕೂ ಹೆಚ್ಚು ಟ್ರ್ಯಾಕ್ಟರ್​ಗಳನ್ನು ವಿತರಣೆ ಮಾಡಲಾಗಿದೆ. ರೈತರಿಗೆ ನಬಾರ್ಡ್ ಯೋಜನೆಯಡಿ ಹೈನುಗಾರಿಕೆ, ಕುರಿ ಸಾಕಾಣಿಕೆ ಸೇರಿದಂತೆ ವಿವಿಧ ಉಪಕಸುಬಗಳಿಗೆ ಸಾಲಸೌಲಭ್ಯವಿದ್ದು, ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೆ.ಸಿ.ಸಿ. ಬ್ಯಾಂಕ್ ನಿರ್ದೇಶಕ ಲಿಂಗರಾಜ ಚಪ್ಪರದಹಳ್ಳಿ ಹೇಳಿದರು.

ಪಟ್ಟಣದ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಮಂಗಳವಾರ ಏರ್ಪಡಿಸಿದ್ದ ಸ್ವಾತಂತ್ರ್ಯೊತ್ಸವ ದಿನಾಚರಣೆಯಲ್ಲಿ ನಾಲ್ಕು ರೈತರಿಗೆ ಟ್ರಾ್ಯಕ್ಟರ್​ಗಳನ್ನು ವಿತರಿಸಿ ಅವರು ಮಾತನಾಡಿದರು. ರೈತರು ಕೇವಲ ಒಂದೆರಡು ಬೆಳೆಗಳಿಗೆ ಸೀಮಿತವಾಗದೇ ಮಿಶ್ರಣ ಬೇಸಾಯ ಮತ್ತು ಹೈನುಗಾರಿಕೆ, ಕುರಿ ಸಾಕಾಣಿಕ ಹೀಗೆ ಹಲವು ಉಪಕಸುಬುಗಳ ಮೂಲಕ ತಮ್ಮ ಆರ್ಥಿಕತೆಯನ್ನು ಬಲಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಹಕಾರಿ ಸಂಘದ ಅಧ್ಯಕ್ಷ ಮಾರುತಿ ವಾಲ್ಮೀಕಿ ಧ್ವಜಾರೋಹಣ ನೇರವೇರಿಸಿದರು.

ರೈತರಾದ ಸಂದೀಪ ನಾಗನಗೌಡ ಪಾಟೀಲ, ಕುಮಾರ ಮಲಪ್ಪ ಹರವಿಶೆಟ್ಟರ್, ಶಿವಪ್ಪ ಭರಮಪ್ಪ ದ್ಯಾವಕ್ಕಳವರ ಮತ್ತು ನಾಗಪ್ಪ ಬಸವಣೆಪ್ಪ ಮಳಗೊಂಡರ ಅವರಿಗೆ ಟ್ರ್ಯಾಕ್ಟರ್​ಗಳನ್ನು ವಿತರಿಸಲಾಯಿತು.

ಸಹಕಾರಿ ಸಂಘದ ಉಪಾಧ್ಯಕ್ಷ ಪರಶುರಾಮ ಪಚ್ಚೇರ, ನಿರ್ದೇಶಕರಾದ ಪ್ರಶಾಂತ ದ್ಯಾವಕ್ಕಳವರ, ಬಸಣ್ಣ ಬಾಗೋಡಿ, ವೀರಬಸಯ್ಯ ಸೂಲಗಪ್ಪನವರ, ರಾಮಚಂದ್ರ ಜಾಧವ್ ಮತ್ತು ವ್ಯವಸ್ಥಾಪಕ ಚಂದ್ರಣ್ಣ ಮಳಗೊಂಡರ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.