ಭದ್ರಾವತಿ: ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಜನ್ಮದಿನದ ಅಂಗವಾಗಿ ನಗರದ ಬಿ.ವೈ.ರಾಘವೇಂದ್ರ ಅಭಿಮಾನಿಗಳ ಬಳಗ ಹಾಗೂ ತಾಲೂಕು ಬಿಜೆಪಿ ಮಂಡಲದಿAದ ಬುಧವಾರ ಹಳೇನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಹಾಲು, ಹಣ್ಣು, ಬ್ರೆಡ್ ವಿತರಿಸಲಾಯಿತು. ಹೊಸಮನೆಯ ಹಿಂದು ಮಹಾಸಭಾ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮಂಡಲ ಅಧ್ಯಕ್ಷ ಜಿ.ಧರ್ಮಪ್ರಸಾದ್, ಮಂಗೋಟೆ ರುದ್ರೇಶ್, ಬಿ.ಕೆ.ಶ್ರೀನಾಥ್, ಮಂಜುನಾಥ್ ಕದಿರೇಶ್, ಎಚ್.ತೀರ್ಥಯ್ಯ, ಕರಿಗೌಡ, ಕದಿರೇಶ್, ಅನ್ನಪೂರ್ಣ ಸಾವಂತ್, ಸಿಮೆಂಟ್ ಮಂಜು ಇತರರಿದ್ದರು.