ಜಿಲ್ಲೆ

ಪೊಲೀಸ್ ವೇತನ ಪ್ಯಾಕೇಜ್ ಅಡಿ ವಿಮಾ ಚೆಕ್ ವಿತರಣೆ

ವಿಜಯವಾಣಿ ಸುದ್ದಿಜಾಲ ಧಾರವಾಡ

ಬ್ಯಾಂಕ್ ಆಫ್ ಬರೋಡಾದಿಂದ ನಗರದ ಎನ್.ಎ. ಮುತ್ತಣ್ಣ ಪೊಲೀಸ್ ವಸತಿ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪೊಲೀಸ್ ವೇತನ ಪ್ಯಾಕೇಜ್ ಅಡಿ ಜೀವ ವಿಮಾ ಚೆಕ್‌ಗಳನ್ನು ವಿತರಿಸಲಾಯಿತು.

ಸೇವೆಯಲ್ಲಿರುವಾಗ ಮೃತರಾದ ಇಬ್ಬರು ಪೊಲೀಸ್ ಸಿಬ್ಬಂದಿಯ ನಾಮನಿರ್ದೇಶಿತರಿಗೆ ಬ್ಯಾಂಕ್ ವತಿಯಿಂದ ತಲಾ 10 ಲಕ್ಷ ರೂಪಾಯಿಯ ಜೀವ ವಿಮಾ ಮೊತ್ತದ ಚೆಕ್‌ಗಳನ್ನು ಎಸ್‌ಪಿ ಗುಂಜನ್ ಆರ್ಯ ವಿತರಿಸಿದರು. ಮೃತ ಪೊಲೀಸರಿಬ್ಬರ ಅವಲಂಬಿತರಿಗೆ ಸುರಕ್ಷತಾ ಪ್ರಯೋಜನ ಕಲ್ಪಿಸಲಾಯಿತು.

ಇದೇವೇಳೆ ಎನ್.ಎ. ಮುತ್ತಣ್ಣ ಪೊಲೀಸ್ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಬ್ಯಾಂಕ್‌ನ ಸಿಎಸ್‌ಆರ್ ಯೋಜನೆಯಡಿ ಸಮವಸ್ತç ಮತ್ತು ಶಾಲಾ ಬ್ಯಾಗ್‌ಗಳನ್ನು ವಿತರಿಸಲಾಯಿತು. ವಸತಿಗೃಹಕ್ಕೆ ಹಾಸಿಗೆಗಳು ಮತ್ತು ಶಾಲೆಗೆ ಧ್ವನಿವರ್ಧಕವನ್ನು ಕೊಡುಗೆಯಾಗಿ ನೀಡಲಾಯಿತು.

ಸಶಸ್ತç ಮೀಸಲು ಪಡೆಯ ಉಪ ಅಧೀಕ್ಷಕ ಡಿ.ಎಸ್. ಧನಗರ್, ಬ್ಯಾಂಕ್ ಆಫ್ ಬರೋಡಾದ ಹುಬ್ಬಳ್ಳಿಯ ಕ್ಷೇತ್ರೀಯ ಉಪ ಪ್ರಬಂಧಕ ಅಮರೇಶ ಗೌಡ, ಕ್ಷೇತ್ರೀಯ ವ್ಯಾಪಾರ ಅಭಿವೃದ್ಧಿ ಅಽಕಾರಿ ಚಿನ್ನಾರಾವ್, ಧಾರವಾಡ ಮುಖ್ಯ ಶಾಖೆಯ ಮುಖ್ಯ ವ್ಯವಸ್ಥಾಪಕ ಮಲ್ಲಿಕಾರ್ಜುನಗೌಡ ಗೌಡರ, ವ್ಯವಸ್ಥಾಪಕರಾದ ವಿಕ್ರಂ ಎಂ., ಸಂದೀಪ ಪಾಟೀಲ, ಮಂಜುನಾಥ ಹಾಗೂ ವಸತಿ ಶಾಲೆಯ ಮುಖ್ಯಾಧ್ಯಾಪಕ ಆರ್.ಎಸ್. ದೇಶಪಾಂಡೆ, ಇತರರಿದ್ದರು. ಶಿಕ್ಷಕ ಯು.ಡಿ. ಬದಾಮಿ ನಿರೂಪಿಸಿದರು.