ಜಿಲ್ಲೆ

ಸಾಧಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ

ಇಂದಿರಾ ಎನ್ ಕೆ

ಕುಂದಾಪುರ: ನಮ್ಮ ನಾಡ ಒಕ್ಕೂಟ ಕಮ್ಯೂನಿಟಿ ಸೆಂಟರ್ ವತಿಯಿಂದ ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ ಕಾರ್ಯಕ್ರಮ ಕುಂದಾಪುರದ ಕಮ್ಯೂನಿಟಿ ಸೆಂಟರ್‌ನ ಮಿನಿ ಹಾಲ್‌ನಲ್ಲಿ ಶನಿವಾರ ಆಯೋಜನೆಗೊಂಡಿತು. ನಮ್ಮ ನಾಡ ಒಕ್ಕೂಟ ಕಮ್ಯೂನಿಟಿ ಸೆಂಟರ್‌ನ ಸಲಹೆಗಾರ ಶಭಾನ್ ಹಂಗ್ಲೂರ್ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಿದರು.

ನಮ್ಮ ನಾಡ ಒಕ್ಕೂಟ ಕಮ್ಯೂನಿಟಿ ಸೆಂಟರ್ ಅಧ್ಯಕ್ಷ ಅಬ್ದುಲ್ ಮುನಾಫ್ ಹಂಗಾರಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಜುಮ್ಮಾ ಮಸ್ಜಿದ್‌ನ ಪ್ರಧಾನ ಕಾರ್ಯದರ್ಶಿ ಶಂಸ್ ತಬ್ರೇಸ್ ಶುಭಹಾರೈಸಿದರು.

ಪ್ರಮುಖರಾದ ಪೀರು ಸಾಹೇಬ್ ಉಡುಪಿ, ಹುಸೇನ್ ಹೈಕಾಡಿ, ಮೊಹಮ್ಮದ್ ಗುಲ್ವಾಡಿ, ಜಮಾಲ್ ಗುಲ್ವಾಡಿ, ಮನ್ಸೂರ್ ಇಬ್ರಾಹಿಂ, ಹಾರುನ್ ರಶೀದ್ ಸಾಸ್ತಾನ್, ಅಶ್ರಫ್ ಹಂಗಾರಕಟ್ಟೆ, ಅಕ್ರಮ್ ಉಡುಪಿ ಇನ್ನಿತರರು ಇದ್ದರು.