ವಿಜಯಪುರ ನಗರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ರಾಜು ಆಲಗೂರ ನಾಮಪತ್ರ ಸಲ್ಲಿಕೆ ವೇಳೆ ಲಂಬಾಣಿ ಕಲಾವಿದರಿಗೆ ಹಣ ಹಂಚುತ್ತಿರುವ ದೃಶ್ಯ. 
ಜಿಲ್ಲೆ

ಲಂಬಾಣಿ ಕಲಾವಿದರಿಗೆ ಹಣ ಹಂಚಿಕೆ

ವಿಜಯಪುರ: ಕಾಂಗ್ರೆಸ್​ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಹಿನ್ನೆಲೆ ನಡೆದ ಬೃಹತ್​ ಮೆರವಣಿಗೆಯಲ್ಲಿ ಕಲಾವಿದರಿಗೆ ಹಂಣ ಹಂಚುತ್ತಿರುವ ವಿಡಿಯೋ ವಿವಾದ ಸೃಷ್ಟಿಸಿದೆ.

ವಿಜಯಪುರ ಎಸ್​ಸಿ ಮೀಸಲು ಲೋಕಸಭೆ ಕ್ಷೇತ್ರಕ್ಕೆ ಸೋಮವಾರ ಕಾಂಗ್ರೆಸ್​ ಅಭ್ಯರ್ಥಿ ರಾಜು ಆಲಗೂರ ನಾಮಪತ್ರ ಸಲ್ಲಿಸಿದರು. ಈ ವೇಳೆ ಸಿದ್ಧೇಶ್ವರ ದೇವಸ್ಥಾನದಿಂದ ಜಿಲ್ಲಾಡಳಿತ ಕಚೇರಿವರೆಗೆ ಬೃಹತ್​ ಮೆರವಣಿಗೆ ಹಮ್ಮಿಕೊಳ್ಳಲಾಯಿತು.

ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು. ಈ ವೇಳೆ ಮುಖಂಡನೋರ್ವ ಲಂಬಾಣಿ ನೃತ್ಯ ಕಲಾವಿದರಿಗೆ ಹಣ ಹಂಚುತ್ತಿರುವುದು ಕಂಡು ಬಂದಿದೆ. ಇದೀಗ ವಿಡಿಯೋ ಸಖತ್​ ವೈರಲ್​ ಆಗುತ್ತಿದೆ.