ಕಿನ್ನಿಗೋಳಿ ರಾಜರತ್ನಪುರದ ಶ್ರೀ ವೀರಮಾರುತಿ ವ್ಯಾಯಾಮ ಶಾಲೆಯಲ್ಲಿ ಉಚಿತ ಪುಸ್ತಕ ವಿತರಣೆ, ಸಹಾಯಧನ ವಿತರಣೆ, ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಿತು. 
ಜಿಲ್ಲೆ

ಭವಿಷ್ಯ ನಿರ್ಮಿಸುವ ಶಿಕ್ಷಣಕ್ಕೆ ಇರಲಿ ಮಹತ್ವ : ಶಾಸಕ ಉಮಾನಾಥ ಕೋಟ್ಯಾನ್ ಕಿವಿಮಾತು

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ

ಇಂದು ಶಿಕ್ಷಣದ ಮಟ್ಟ ಬೆಳೆದಿದೆ. ಪಾಲಕರು ಮಕ್ಕಳ ಅಂಕಗಳಿಗೆ ಮಾತ್ರ ಮಹತ್ವ ಕೊಡುತ್ತಾರೆ. ಅವರ ಭವಿಷ್ಯದ ಬಗ್ಗೆಯೂ ಯೋಚನೆ ಮಾಡಬೇಕು. ಮಕ್ಕಳ ಭವಿಷ್ಯ ನಿರ್ಮಿಸುವ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವುದು ಅತೀ ಅವಶ್ಯ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ಕಿನ್ನಿಗೋಳಿ ರಾಜರತ್ನಪುರದ ಶ್ರೀ ವೀರಮಾರುತಿ ವ್ಯಾಯಾಮ ಶಾಲೆಯಲ್ಲಿ ಉಚಿತ ಪುಸ್ತಕ ವಿತರಣೆ, ಸಹಾಯಧನ ವಿತರಣೆ, ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಿಪಂ ಮಾಜಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಅಧ್ಯಕ್ಷತೆ ವಹಿಸಿದ್ದರು. ವೀರ ಮಾರುತಿ ವ್ಯಾಯಾಮ ಶಾಲೆಯ ಅಧ್ಯಕ್ಷ ಈಶ್ವರ್ ಕಟೀಲು, ಕರಾಟೆ ಶಿಕ್ಷ ಮೋರ್ಗನ್ ವಿಲಿಯಂ, ವ್ಯಾಯಾಮ ಶಾಲೆಯ ಮೋನಪ್ಪ ಗುಜರನ್, ಭಾಸ್ಕರ ಪೂಜಾರಿ, ಚಂದ್ರಹಾಸ ಅಂಚನ್, ಗುರುರಾಜ ಮಲ್ಲಿಗೆಯಂಗಡಿ, ಮಮತಾ ಗಣೇಶ್, ನಾಗರಾಜ ಕುಲಾಲ್ ಮತ್ತಿತತರು ಉಪಸ್ಥಿತರಿದ್ದರು.

ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ಪ್ರಕಾಶ್ ಹಾಗೂ ಕಿರಣ್ ಆಚಾರ್, ಕೀರ್ತನ್ ಕಟೀಲ್, ಸ್ವಾತಿ ಸಾಲ್ವಾನ್ ಅವರನ್ನು ಗೌರವಿಸಲಾಯಿತು. ವ್ಯಾಯಾಮ ಶಾಲೆಯ ಕೇಶವ ಕರ್ಕೇರ ವಂದಿಸಿದರು. 250 ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು.