ಜಿಲ್ಲೆ

ಬಡವರಿಗೆ ಆಹಾರ ಪೊಟ್ಟಣ ವಿತರಣೆ

ಹುಬ್ಬಳ್ಳಿ: ರಂಜಾನ್ ನಿಮಿತ್ತ ಅಮನ್ ಪ್ರತಿಷ್ಠಾನದಿಂದ ಹುಬ್ಬಳ್ಳಿಯ ಇಂಡಿಪಂಪ್ ವೃತ್ತ, ಸ್ಟೇಷನ್ ರಸ್ತೆ, ಸಿಬಿಟಿ ವೃತ್ತ ಸೇರಿ ಪ್ರಮುಖ ಬೀದಿಗಳಲ್ಲಿ ತೆರಳಿ ಅಲ್ಲಿಯ ಬಡವರು ಮತ್ತು ಭಿಕ್ಷುಕರಿಗೆ ನೀರು, ಆಹಾರ ಪೊಟ್ಟಣ ಹಾಗೂ ಬಟ್ಟೆಗಳನ್ನು ಭಾನುವಾರ ವಿತರಿಸಲಾಯಿತು.

ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ನವೀದ್ ಮುಲ್ಲಾ, ಕಾರ್ಯಾಧ್ಯಕ್ಷ ಮಂಜೂರು ಅಥಣಿ, ಗೌರವ ಕಾರ್ಯದರ್ಶಿ ರಫೀಕ ಚವ್ಹಾಣ, ಕೋಶಾಧ್ಯಕ್ಷ ಸುಹೇಲ್ಖಾನ್ ಪಠಾಣ, ನಿರ್ದೇಶಕರಾದ ಯಶವಂತ ಪಾಟೀಲ, ಕೆವೀನ್ ಡಿಸೂಜಾ, ಜಮೀರ ಅಹ್ಮದ ಹುಡೇದ, ವೀರೇಶ ಗಂಜಿಗಟ್ಟಿ ಇತರರು ಉಪಸ್ಥಿತರಿದ್ದರು.