ನಾಪೋಕ್ಲು ಲಯನ್ಸ್ ಕ್ಲಬ್ ವತಿಯಿಂದ ಬಡ ಕುಟುಂಬಗಳಿಗೆ ಆಹಾರದ ಪೊಟ್ಟಣಗಳನ್ನು ವಿತರಿಸಲಾಯಿತು. 
ಜಿಲ್ಲೆ

ಬಡ ಕುಟುಂಬಗಳಿಗೆ ಆಹಾರ ಪೊಟ್ಟಣ ವಿತರಣೆ

ನಾಪೋಕ್ಲು: ಹಸಿವು ಮುಕ್ತ ಸಮಾಜ ಕಾರ್ಯಕ್ರಮದಡಿ ಸ್ಥಳಿಯ ಲಯನ್ಸ್ ಕ್ಲಬ್ ವತಿಯಿಂದ 10 ಬಡ ಕುಟುಂಬಗಳಿಗೆ ಆಹಾರ ಪೊಟ್ಟಣ (ಫುಡ್‌ಕಿಟ್) ವಿತರಿಸಲಾಯಿತು.

ಕ್ಲಬ್ ಅಧ್ಯಕ್ಷ ಎಂ.ಬಿ.ಕುಟಪ್ಪ ಅವರ ಅಧ್ಯಕ್ಷತೆಯಲ್ಲಿ ಇಲ್ಲಿನ ಮಹಿಳಾ ಸಮಾಜದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ಥಳೀಯ ಬಡ ಹತ್ತು ಕುಟುಂಬಗಳಿಗೆ ಪ್ರತ್ಯೇಕವಾಗಿ ಒಂದು ತಿಂಗಳಿಗೆ ಬೇಕಾಗುವ ಅಕ್ಕಿ ಹಾಗೂ ಇತರ ಪದಾರ್ಥಗಳನ್ನು ಒಳಗೊಂಡ ಕಿಟ್ ಮತ್ತು ಬ್ಲಾಂಕೆಟ್ ವಿತರಿಸಲಾಯಿತು.

ಲಯನ್ಸ್ ಪ್ರಾಂತೀಯ ಅಧ್ಯಕ್ಷ ಡಾ.ಪಂಚಮ್ ತಿಮ್ಮಯ್ಯ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಬನ್ಸಿ ಭೀಮಯ್ಯ, ಖಜಾಂಚಿ ವಸಂತ ಮುತ್ತಪ್ಪ, ಸುಧಿ ತಿಮ್ಮಯ್ಯ, ರೇಷ್ಮಾ ಉತ್ತಪ್ಪ, ರಘು ತಿಮ್ಮಯ್ಯ, ಮೇರಿ ಚೆಟ್ಟಿಯಪ್ಪ, ಸುಭಾಷ್ ತಿಮ್ಮಯ್ಯ, ರೇಖಾ ಪೊನ್ನಣ್ಣ ಉಪಸ್ಥಿತರಿದ್ದರು.