ಚಿಕ್ಕಮಗಳೂರು: ಕೇರಳದ ವಯನಾಡು ಪ್ರಕೃತಿ ವಿಕೋಪದಿಂದ ತತ್ತರಿಸಿ ಕುಟುಂಬವನ್ನು ಕಳೆದುಕೊಂಡು ಹಸಿನಿಂದ ಬಳಲುತ್ತಿರುವವರಿಗೆ ಕಾಂಗ್ರೆಸ್ ಕಿಸಾನ್ ರಾಜ್ಯ ಸಂಚಾಲಕ ಸಿ.ಎನ್.ಅಕ್ಮಲ್ ೭೦ಕ್ಕೂ ಹೆಚ್ಚು ಆಹಾರ ಕಿಟ್‌ಗಳನ್ನು ವಾಹನದಲ್ಲಿ ಕಳುಹಿಸಿಕೊಟ್ಟು ಸಂತ್ರಸ್ಥರಿಗೆ ನೆರವಾಗಿದ್ದಾರೆ.
ಈ ವೇಳೆ ಮಾತನಾಡಿದ ಸಿ.ಎನ್.ಅಕ್ಮಲ್ ಪ್ರವಾಹ ಹಾಗೂ ಗುಡ್ಡ ಕುಸಿತದಿಂದ ಕೇರಳದ ವಯನಾಡು ಜನತೆ ಜೀವನವನ್ನು ಕಳೆದುಕೊಂಡು ದುಸ್ಥಿತಿಯಲ್ಲಿದೆ. ಇವರಿಗೆ ದಿನನಿತ್ಯ ಊಟೋಪಚಾರಕ್ಕೆ ಬಹಳಷ್ಟು ಸಮಸ್ಯೆ ಕಂಡುಬರುತ್ತಿರುವ ಹಿನ್ನೆಲೆ ಕೈಲಾದ ಅಳಿಲು ಸೇವೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಆಹಾರ ಕಿಟ್‌ನಲ್ಲಿ ಅಕ್ಕಿ, ಬೇಳೆ, ಸಾಂಬಾರು ಎಣ್ಣೆ, ಮೈದಾಹಿಟ್ಟು, ಬಿಸ್ಕೆಟ್ ಸೇರಿದಂತೆ ದಿನಸಿ ಪದಾರ್ಥಗಳನ್ನು ವಾಹನದಲ್ಲಿ ಕೇರಳದ ಟ್ರಸ್ಟ್ಗೆ ಕಳಿಸಿಕೊಟ್ಟಿz್ದೆÃವೆ. ಹೀಗಾಗಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕ ಸಮಾಜ ಮಾನವೀಯತೆ ದೃಷ್ಟಿಯಿಂದ ಸಹಾಯಹಸ್ತ ಚಾಚಬೇಕು ಎಂದು ಮನವಿ ಮಾಡಿದರು.
ಇತ್ತೀಚಿನ ಸ್ವಾರ್ಥ ಪ್ರಪಂಚದಲ್ಲಿ ಅವರ ವೈಯಕ್ತಿಕ ಜೀವನಕ್ಕೆ ಜನತೆ ಸೀಮಿತವಾಗಿದೆ. ಹಾಗಾಗಿ ಇಂಥ ವಿಕೋಪ ಸಂದರ್ಭದಲ್ಲಿ ನೆರೆಸಂತ್ರಸ್ಥರ ಸ್ಥಳಕ್ಕೆ ತೆರಳಲು ಆಗದಿದ್ದರೂ ಕನಿಷ್ಟ ಆಹಾರ ಪೂರೈಸುವ ಕಾರ್ಯದಲ್ಲಿ ಸ್ವಯಂಪ್ರೇರಿತವಾಗಿ ನಿರಂತರಾದರೆ ಮನುಷ್ಯನಾಗಿ ಹುಟ್ಟಿದಕ್ಕೂ ಸಾರ್ಥಕವಾಗಲಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಫೈರೋಜ್, ರಿಜ್ವಾನ್ ಮತ್ತಿತರರಿದ್ದರು.